

ಮಾನ್ವಿ: ಸೀಕಲ್ ಗ್ರಾಮದ ಸರ್ವೇ ನಂ.12/*/* 13 ಎಕರೆ ಪೈಕೆ 2 ಎಕರೆಯನ್ನು ಮಾನ್ವಿಯ ಕೊಳೆಗೇರಿ ಪ್ರದೇಶದ ನಿವಾಸಿಗಳ ವಾಸದ ಉದ್ದೇಶಕ್ಕೆ ಕಾಯ್ದಿರಿಸಲು ಉದ್ದೇಶಿಸಿದ್ದು, ಇದರಿಂದ ಗ್ರಾಮದಲ್ಲಿನ 100ಕ್ಕೂ ಹೆಚ್ಚಿನ ವಸತಿ ರಹಿತ ಕುಟುಂಬಗಳಿಗೆ ಅನ್ಯಾಯವಾಗಲಿದೆ.
ನಿಗದಿತ ಜಮೀನನ್ನು ಗ್ರಾಮದಲ್ಲಿನ ವಸತಿ ರಹಿತರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಗ್ರೇಡ್ -2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.
ಪ್ರಮುಖರಾದ ಜಿಂದಪ್ಪ, ನಾಗರೆಡ್ಡಿ, ವೀರೇಶ ಸೀಕಲ್, ಹೊನ್ನಪ್ಪ, ರಮೇಶ, ರಾಮಣ್ಣ ನಾಯಕ, ದುರುಗಪ್ಪ, ಮಲ್ಲೇಶ, ಮಹಾಂತೇಶಯ್ಯಸ್ವಾಮಿ, ಕರಿಯಪ್ಪ ಓಲೇಕಾರ, ಭೀಮನಗೌಡ, ನಾಗಪ್ಪ, ನರಸಿಂಹಲು, ರಾಜಶೇಖರ ಬೋಮ್ಮನಾಳ ಇತರರು ಇದ್ದರು.