ರಾಷ್ಟ್ರಪ್ರೇಮ ಮೈಗೂಡಿಸಿಕೊಳ್ಳಲು ಸಲಹೆ

ಕೋಡಿಮಾರನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ, ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ
ಕೋಡಿಮಾರನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಯೋಜಿಸಲಾಗಿತ್ತು. ಡಾ.ಬಿ.ವಿ.ನಂದೀಶ್, ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಮಾದಾಪುರ ಸುಬ್ಬಣ್ಣ, ಶ್ರೀನಿವಾಸ ಉಡುಪ, ಸುಮಾ ಇದ್ದರು.
ಕೋಡಿಮಾರನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಯೋಜಿಸಲಾಗಿತ್ತು. ಡಾ.ಬಿ.ವಿ.ನಂದೀಶ್, ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಮಾದಾಪುರ ಸುಬ್ಬಣ್ಣ, ಶ್ರೀನಿವಾಸ ಉಡುಪ, ಸುಮಾ ಇದ್ದರು.
Published on: 

ಕಿಕ್ಕೇರಿ; ದೇಶಕ್ಕಾಗಿ ಪ್ರಾಣತೆತ್ತ ಮಹಾತ್ಮರ ಆದರ್ಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಮಕ್ಕಳಿಗೆ ತಿಳಿಹೇಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ತಿಳಿಸಿದರು.

ಹೋಬಳಿಯ ಕೋಡಿಮಾರನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗಾಂಧಿ, ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿಯಲ್ಲಿ ಮಾತನಾಡಿದ ಅವರು, ಗ್ರಾಮ ಸ್ವರಾಜ್ಯ ಕಲ್ಪನೆ ಗಾಂಧಿಯದಾಗಿದ್ದು, ಸತ್ಯ, ಅಹಿಂಸೆ, ಸನ್ನಡತೆ, ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಳ್ಳದೆ ದೇಶದ ಸಮಸ್ಯೆ ಪರಿಹಾರ ಸಾಧ್ಯವೇ ಇಲ್ಲ ಎಂದರು.

ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಜೈಜವಾನ್, ಜೈಕಿಸಾನ್ ಎಂದ ಶಾಸ್ತ್ರಿ ಅವರ ಸರಳ ವ್ಯಕ್ತಿತ್ವ, ಎತ್ತರದ ಚಿಂತನೆ ಅವಶ್ಯವಿದೆ. ನಾಡಿಗೆ ಪ್ರಾಣತೆತ್ತ ಮಹನೀಯರ ಆತ್ಮಕ್ಕೆ ತುಸು ನೆಮ್ಮದಿ ಸಿಗಲು ನಮ್ಮ ದೇಶ, ನಮ್ಮ ನಾಡು ಉಳಿಯಬೇಕಿದೆ ಎಂದರು.

ಸಮಾಜ ಸೇವಾಕರ್ತ ಮಾದಾಪುರ ಸುಬ್ಬಣ್ಣ ಸ್ವಾತಂತ್ರ್ಯ ಚಳವಳಿ ಕುರಿತು ಮಾತನಾಡಿದರು. ಗಾಯಕ ನಗರ ಶ್ರೀನಿವಾಸ ಉಡುಪ ಮಕ್ಕಳಿಗೆ ರಘುಪತಿ ರಾಘವ ರಾಜರಾಂ ಮತ್ತಿತರ ಗೀತೆಗಳನ್ನು ಹೇಳಿಕೊಟ್ಟರು. ಮುಖ್ಯಶಿಕ್ಷಕಿ ಸುಮಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net