ಮಹಿಳೆಯರ ಸುರಕ್ಷತೆ ಎಲ್ಲರ ಹೊಣೆಗಾರಿಕೆ

ಡಾ.ಸೌಮ್ಯಾ ರಾಜೇಶ್ ಅಭಿಪ್ರಾಯ
ಮಣಿಗೆರೆ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಆಯೋಜಿಸಿದ್ದ ಮಹಿಳಾ ದೌರ್ಜನ್ಯ ತಡೆ ಮತ್ತು ಆರೋಗ್ಯ ಅರಿವು ಕಾರ್ಯಕ್ರಮವನ್ನು ಭಾರತೀನಗರ ರೋಟರಿ ಸೆಂಟ್ರಲ್‌ನ ಕಾರ್ಯದರ್ಶಿ ಡಾ. ಸೌಮ್ಯಾ ರಾಜೇಶ್ ಉದ್ಘಾಟಿಸಿದರು. ಡಾ. ಎ.ಟಿ. ಶ್ರೀನಿವಾಸಮೂರ್ತಿ, ಡಾ. ಶಾರದಮ್ಮ, ಡಾ. ಪಾರ್ಥ ಇತರರು ಇದ್ದರು.
ಮಣಿಗೆರೆ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಹಿಳಾ ದೌರ್ಜನ್ಯ ತಡೆ ಮತ್ತು ಆರೋಗ್ಯ ಅರಿವು ಕಾರ್ಯಕ್ರಮವನ್ನು ಭಾರತೀನಗರ ರೋಟರಿ ಸೆಂಟ್ರಲ್‌ನ ಕಾರ್ಯದರ್ಶಿ ಡಾ. ಸೌಮ್ಯಾ ರಾಜೇಶ್ ಉದ್ಘಾಟಿಸಿದರು. ಡಾ. ಎ.ಟಿ. ಶ್ರೀನಿವಾಸಮೂರ್ತಿ, ಡಾ. ಶಾರದಮ್ಮ, ಡಾ. ಪಾರ್ಥ ಇತರರು ಇದ್ದರು. Women's safety is everyone's responsibility.
Published on: 

ಕೆ.ಎಂ.ದೊಡ್ಡಿ: ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವುದರ ಜತೆಗೆ, ಮಹಿಳೆಯರು ತಮ್ಮ ಹಕ್ಕುಗಳು, ಸುರಕ್ಷತೆ ಹಾಗೂ ಆರೋಗ್ಯದ ಬಗ್ಗೆ ಜಾಗೃತರಾಗುವುದು ಅಗತ್ಯವಾಗಿದೆ ಎಂದು ಭಾರತೀನಗರ ರೋಟರಿ ಸೆಂಟ್ರಲ್‌ನ ಕಾರ್ಯದರ್ಶಿ ಡಾ. ಸೌಮ್ಯಾ ರಾಜೇಶ್ ಹೇಳಿದರು.

ಸಮೀಪದ ಮಣಿಗೆರೆ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ ನಿವಾರಣಾ ಸಮಿತಿ ಹಾಗೂ ಐಕ್ಯೂಎಸಿ ವತಿಯಿಂದ ಆಯೋಜಿಸಿದ್ದ ಮಹಿಳಾ ದೌರ್ಜನ್ಯ ತಡೆ ಮತ್ತು ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಕೌಟುಂಬಿಕ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹಲವು ರೀತಿಯ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು, ಅನ್ಯಾಯದ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಬೇಕು. ಮಹಿಳೆಯರ ಸುರಕ್ಷತೆ ಕೇವಲ ಮಹಿಳೆಯರ ಜವಾಬ್ದಾರಿಯಲ್ಲ, ಸಮಾಜದ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.

ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಯಾವುದೇ ಆರೋಗ್ಯ ಸಮಸ್ಯೆಯ ಲಕ್ಷಣಗಳು ಕಂಡುಬಂದರೆ ಅದನ್ನು ಮುಂದೂಡದೆ ಸೂಕ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು. ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಡಾ. ಸೌಮ್ಯಾ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ. ಎ.ಟಿ. ಶ್ರೀನಿವಾಸಮೂರ್ತಿ ವಹಿಸಿ ಮಾತನಾಡಿದರು.

ಮಹಿಳಾ ದೌರ್ಜನ್ಯ ನಿವಾರಣಾ ಸಮಿತಿಯ ಸಂಚಾಲಕಿ ಡಾ. ಶಾರದಮ್ಮ, ಐಕ್ಯೂಎಸಿ ಸಂಚಾಲಕ ಡಾ. ಪಾರ್ಥ, ಪ್ರೊ. ಮಂಚಯ್ಯ, ಪ್ರೊ. ಬರಗೂರಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಸುರೇಶ್ ಬಾಬು, ಗ್ರಂಥಪಾಲಕ ಡಾ. ಸುರೇಂದ್ರ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net