ಮಲೆಮಹದೇಶ್ವರಬೆಟ್ಟ ಪಾದಯಾತ್ರೆಗೆ ಚಾಲನೆ

ಚೆನ್ನೀಪುರದಿಂದ 300ಕ್ಕೂ ಹೆಚ್ಚು ಭಕ್ತರು ಭಾಗಿ
ಚೆನ್ನೀಪುರ ಗ್ರಾಮದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಹಮ್ಮಿಕೊಂಡಿರುವ ನಾಲ್ಕನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ವಕೀಲ ನಟೇಶ್, ಸಿ.ಎಂ. ಶಿವರಾಜು, ಉಮೇಶ್, ಸುರೇಶ್, ರಾಜೇಶ್ ಇನ್ನಿತರರಿದ್ದರು.
ಚೆನ್ನೀಪುರ ಗ್ರಾಮದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಹಮ್ಮಿಕೊಂಡಿರುವ ನಾಲ್ಕನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ವಕೀಲ ನಟೇಶ್, ಸಿ.ಎಂ. ಶಿವರಾಜು, ಉಮೇಶ್, ಸುರೇಶ್, ರಾಜೇಶ್ ಇನ್ನಿತರರಿದ್ದರು.
Published on: 

ಹಲಗೂರು: ಸಮೀಪದ ಚೆನ್ನೀಪುರ ಗ್ರಾಮದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹಮ್ಮಿಕೊಂಡಿರುವ ನಾಲ್ಕನೇ ವರ್ಷದ ಪಾದಯಾತ್ರೆಗೆ ಶುಕ್ರವಾರ ಬೆಳಗ್ಗೆ ಗ್ರಾಮದ ಮಹದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ವಕೀಲ ನಟೇಶ್ ಮಾತನಾಡಿ, ಗ್ರಾಮದ ಮನೆ ದೇವರಾದ ಮಲೆಮಹದೇಶ್ವರ ಸ್ವಾಮಿಯ ದರ್ಶನ ಪಡೆಯುವ ಉದ್ದೇಶದಿಂದ ಗ್ರಾಮದ ಮಹಿಳೆಯರು, ಮಕ್ಕಳು ಸೇರಿದಂತೆ 300ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಪಾದಯಾತ್ರೆಗೆ ಅವಶ್ಯವಿರುವ ಊಟ, ವಸತಿಯನ್ನು ಗ್ರಾಮದ ಸಹಕಾರದೊಂದಿಗೆ ಕಲ್ಪಿಸಲಾಗಿದೆ. ನ.22ರಂದು ತಾಳುಬೆಟ್ಟದಿಂದ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಸೇರಿದಂತೆ ಸುಮಾರು ಸಾವಿರ ಭಕ್ತರು ಪಾದಯಾತ್ರೆ ಮೂಲಕ ಮಲೆಮಹದೇಶ್ವರ ಬೆಟ್ಟ ತಲುಪಲಿದ್ದಾರೆ ಎಂದು ತಿಳಿಸಿದರು.

ನ.23ರಂದು ಬೆಳಿಗ್ಗೆ 8 ಗಂಟೆಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಗಂಗೆತಡಿಯಿಂದ ದೇವರನ್ನು ಕರೆತರಲಾಗುವುದು. ಶಿವಸಾರಥಿ ಪೂಜಾ ಕುಣಿತದೊಂದಿಗೆ ಚೆನ್ನೀಪುರದ ಮಹದೇಶ್ವರ ಸ್ವಾಮಿ ಬಸಪ್ಪ ಹಾಗೂ ಬಸವನಪುರ ಮಧ್ಯಮಾರ್ಗದ ಬಸವೇಶ್ವರ ಬಸಪ್ಪ ದೇವರುಗಳ ಮೆರವಣಿಗೆ ನಡೆಯಲಿದೆ. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ಮನವಿ ಮಾಡಿದರು.

ಗ್ರಾಮದ ಮುಖಂಡರಾದ ಸಿ.ಎಂ. ಶಿವರಾಜು, ಉಮೇಶ್, ಸುರೇಶ್, ರಾಜೇಶ್, ದೇವೇಗೌಡ, ಮರಿಸ್ವಾಮಿ, ನಾಗಲಿಂಗು, ಸಂತೋಷ್, ತಿಮ್ಮೇಗೌಡ, ಪುಟ್ಟಸ್ವಾಮಿ, ಶಿವಮಾದು, ಸ್ವಾಮಿ, ನಾಗೇಗೌಡ ಸೇರಿದಂತೆ ಹಲವರು ಇದ್ದರು.