ಬ್ರಿಟಿಷರ ವಿರುದ್ಧ ಗಾಂಧಿ ಅಹಿಂಸಾ ಹೋರಾಟ

ತಹಸೀಲ್ದಾರ್ ಆದರ್ಶ ಮೆಚ್ಚುಗೆ
 ಪಾಂಡವಪುರದ ತಹಸೀಲ್ದಾರ್ ಸಭಾಂಗಣದಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.
ಪಾಂಡವಪುರದ ತಹಸೀಲ್ದಾರ್ ಸಭಾಂಗಣದಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.
Published on: 

ಪಾಂಡವಪುರ: ಪಟ್ಟಣದ ತಹಸೀಲ್ದಾರ್ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ರಾಷ್ಟ್ರಪಿತ ಮಹಾತ್ಮಗಾಂಧಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಣೆ ಮಾಡಲಾಯಿತು.

ತಹಸೀಲ್ದಾರ್ ಆದರ್ಶ್, ಇಒ ವೀಣಾ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿ, ಗಾಂಧೀಜಿ ಯಾವುದೇ ಸರ್ಕಾರಿ ಹುದ್ದೆ, ಅಧಿಕಾರ ಇಲ್ಲದಿದ್ದರೂ ದೇಶದ ಸ್ವಾತಂತ್ರೃಕ್ಕಾಗಿ ಬಿಟ್ರಿಷರ ವಿರುದ್ಧ ಸತ್ಯ, ಶಾಂತಿ, ಅಹಿಂಸೆ ಪರವಾದ ಹೋರಾಟ ಮಾಡುವ ಮೂಲಕ ದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟರು. ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದರೂ ಗ್ರಾಮಗಳ ಅಭಿವೃದ್ಧಿಯಾಗದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದಿದ್ದರು. ಅಲ್ಲದೆ ಲಾಲ್ ಬಹದ್ದೂರ್ ಶಾಸ್ತ್ರಿ ಸಹ ದಕ್ಷತೆಯಿಂದ ಆಡಳಿತ ನಡೆಸಿ ದೇಶದ ಪ್ರಗತಿಗೆ ನೆರವಾಗಿದ್ದಾರೆ ಎಂದರು.

ತಾಪಂ ಇಒ ವೀಣಾ ಮಾತನಾಡಿ, ಗಾಂಧಿ ಸ್ವಾತಂತ್ರೃ ಹೋರಾಟದ ನಾಯಕತ್ವ ವಹಿಸಿದ್ದರು. ಶಾಂತಿ, ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇಂತಹ ಮಹಾನ್ ವ್ಯಕ್ತಿಗಳ ಆದರ್ಶವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಗೈರು:

ಶಾಸಕರು ಅಮೆರಿಕಕ್ಕೆ ತೆರಳಿರುವುದರಿಂದ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಶಾಸಕರ ಜತೆಗೆ ಕೆಲವೂ ಅಧಿಕಾರಿಗಳು ಸಹ ಗೈರು ಹಾಜರಾಗಿದ್ದರು.

ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಸತೀಶ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸನ್ನ, ಉಪ ತಹಸೀಲ್ದಾರ್ ಮೋಹನ್, ಡಿಎಸ್‌ಎಸ್ ಮುಖಂಡ ಅಂಕಯ್ಯ ಸೇರಿದಂತೆ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net