

ಮದ್ದೂರು: ಪ್ರಧಾನ ಮಂತ್ರಿ ಮೋದಿ ವಿಶ್ವ ಕಂಡ ಮೇರು ನಾಯಕ. ಇವರ ಆಡಳಿತಾಧಿವದಿಯಲ್ಲಿ ದೇಶ ಸಮಗ್ರ ಪ್ರಗತಿಯತ್ತ ಸಾಗುತ್ತಿದೆ ಎಂದು ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಬಣ್ಣಿಸಿದರು.
ಪ್ರಧಾನಿ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ತಾಲೂಕಿನ ಸಾದೊಳಲು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಇತ್ತೀಚೆಗೆ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ ಸ್ವಚ್ಛತಾ ಕಾರ್ಯ ಹಾಗೂ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ.ಸತೀಶ್, ಪ್ರಧಾನ ಕಾರ್ಯದರ್ಶಿ ಎಂ.ಸಿ.ಸಿದ್ದು, ಮಹಿಳಾ ಮೋರ್ಚ ಅಧ್ಯಕ್ಷೆ ಶ್ವೇತಾ, ಮುಖಂಡರಾದ ಸೌಮ್ಯ, ಮಮತಾರಾಂ, ತ್ರಿವೇಣಿ, ಕಿರಣ್‌ಕುಮಾರ್, ಕಾಂತರಾಜು, ಗಿರೀಶ್, ಕೃಷ್ಣ, ಮಿಥುನ್, ಹೇಮಂತ್, ಕೋಮಲಲಾ ಇತರರು ಭಾಗವಹಿಸಿದ್ದರು.