ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಆಯ್ಕೆ

ಸಂಘದ ಅಧ್ಯಕ್ಷರಾಗಿ ಜಿ.ಎಚ್.ವಿಶ್ವನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ ಮೂರ್ತಿ
ಮದ್ದೂರಲ್ಲಿ ಆಯೋಜಿಸಿದ್ದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಹನ್ನೊಂದು ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು. ನಾಗೇಶ್, ಶ್ರೀನಿವಾಸ್, ರಮೇಶ್, ಚೌಡೇಶ್, ಶ್ರೀನಿವಾಸ್, ಪ್ರಸನ್ನ, ಯೋಗಾನಂದ, ಮರೀಗೌಡ ಜವರೇಗೌಡ, ಪ್ರಶೀಲಾ ಇದ್ದರು.
ಮದ್ದೂರಲ್ಲಿ ಆಯೋಜಿಸಿದ್ದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಹನ್ನೊಂದು ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು. ನಾಗೇಶ್, ಶ್ರೀನಿವಾಸ್, ರಮೇಶ್, ಚೌಡೇಶ್, ಶ್ರೀನಿವಾಸ್, ಪ್ರಸನ್ನ, ಯೋಗಾನಂದ, ಮರೀಗೌಡ ಜವರೇಗೌಡ, ಪ್ರಶೀಲಾ ಇದ್ದರು.
Published on: 

ಮದ್ದೂರು; ನಗರದ ಬಿಆರ್‌ಸಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಹನ್ನೊಂದು ನಿರ್ದೇಶಕರು ಹಾಗೂ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು.

ಸಂಘದ ಅಧ್ಯಕ್ಷರಾಗಿ ಜಿ.ಎಚ್.ವಿಶ್ವನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ ಮೂರ್ತಿ, ಖಜಾಂಚಿಯಾಗಿ ಶ್ರೀಮಾ ಹಾಗೂ ನಿರ್ದೇಶಕರಾಗಿ ಡಾ.ಎಚ್.ಮಲ್ಲೀಕೇಶ್, ಮೋಹನ್, ನಾಗರಾಜ್, ಪ್ರವೀಣ್ ಕುಮಾರ್, ಶಾಲಿನಿ, ರಮೇಶ್, ಶಶಿ ಕಿರಣ್, ಸುಷ್ಮಾ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಚೌಡೇಶ್ ತಿಳಿಸಿದರು. ನೂತನ ಪದಾಧಿಕಾರಿಗಳನ್ನು ಸಮನ್ವಯಾಧಿಕಾರಿ ನಾಗೇಶ್ ಅಭಿನಂದಿಸಿದರು.

ನೂತನ ಅಧ್ಯಕ್ಷ ಜಿ.ಎಚ್.ವಿಶ್ವ ನಾಥ್ ಮಾತನಾಡಿ, ಸಂಘದ ನಿರ್ದೇಶಕರು ಹಾಗೂ ಶಿಕ್ಷಕರು ನನ್ನ ಮೇಲೆ ವಿಶ್ವಾಸ ವಿಟ್ಟು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸಲು ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ಶಿಕ್ಷಕರಾದ ತೂಬಿನಕೆರೆ ರಮೇಶ್, ಶ್ರೀನಿವಾಸ್, ಪ್ರಸನ್ನ, ಯೋಗಾನಂದ , ಮರೀಗೌಡ ಜವರೇಗೌಡ, ಪ್ರಶೀಲಾ, ಜ್ಞಾನ ಕುಮಾರಿ, ಕಿರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net