ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ

 ನಾಗಮಂಗಲ ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಅಲಂಕೃತಗೊಂಡಿದ್ದ ಶ್ರೀ ಸೌಮ್ಯಕೇಶವಸ್ವಾಮಿ ಮೂರ್ತಿ.
ನಾಗಮಂಗಲ ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಅಲಂಕೃತಗೊಂಡಿದ್ದ ಶ್ರೀ ಸೌಮ್ಯಕೇಶವಸ್ವಾಮಿ ಮೂರ್ತಿ.
Published on
ನಾಗಮಂಗಲ: ತಾಲೂಕಿನ ವಿಷ್ಣು ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ಭಕ್ತರು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ದೇವಾಲಯಗಳ ಮುಖ್ಯ ದ್ವಾರದ ಮೂಲಕ ಗರ್ಭಗುಡಿಯ ದೇವರ ದರ್ಶನ ಮಾಡುವುದು ಸರ್ವೇ ಸಾಮಾನ್ಯ. ಆದರೆ ವೈಕುಂಠ ಏಕಾದಶಿಯಂದು ವೈಕುಂಠ ದ್ವಾರದ ಮೂಲಕ ದೇವರ ದರ್ಶನವಾದರೆ ಒಳಿತು ಎಂಬುದು ಆಸ್ತಿಕರ ನಂಬಿಕೆ. ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ, ಶ್ರೀ ಯೋಗ ನರಸಿಂಹಸ್ವಾಮಿ, ಶ್ರೀ ಕೋದಂಡರಾಮ ಸ್ವಾಮಿ, ಶ್ರೀ ಕಲ್ಯಾಣ ವೆಂಕಟೇಶ್ವರಸ್ವಾಮಿ ಮತ್ತು ಕಂಚಿವರದರಾಯಸ್ವಾಮಿ. ಬಿಂಡಿಗನವಿಲೆಯ ಶ್ರೀ ಚನ್ನಕೇಶವಸ್ವಾಮಿ, ಕಂಬದಹಳ್ಳಿ ಆಂಜನೇಯಸ್ವಾಮಿ, ಕೋಟೆಬೆಟ್ಟದ ಸಾಲಾದ್ರಿ ಶ್ರೀ ಕೋಟೆ ವೆಂಕಟರಮಣಸ್ವಾಮಿ, ಬೆಳ್ಳೂರಿನ ಆದಿಮಾದವರಾಯ ಸ್ವಾಮಿ, ಹದ್ದಿನಕಲ್ಲು ಹನುಮಂತರಾಯಸ್ವಾಮಿ, ಬೊಮ್ಮನಾಯಕನಹಳ್ಳಿಯ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಿದವು. ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ದಂಪತಿ ದೇವರ ದರ್ಶನ ಪಡೆದರು. ವಿವಿಧೆಡೆ ಅನ್ನದಾನ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net