ಓದಿನೊಂದಿಗೆ ಕ್ರೀಡೆಗಳಲ್ಲೂ ಪಾಲ್ಗೊಳ್ಳಿ

ಎಸ್ಸಿ, ಎಸ್ಟಿ ಆಯೋಗದ ಅಧ್ಯಕ್ಷ ಡಾ.ಮೂರ್ತಿ ಸಲಹೆ
ಮಳವಳ್ಳಿ
ಮಳವಳ್ಳಿ ಪಟ್ಟಣಕ್ಕೆ ಸಮೀಪದ ರಾಗಿಬೊಮ್ಮನಹಳ್ಳಿ ಗೇಟ್ ಬಳಿಯ ಎಂ.ಜೆ.ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಪರಿಶಿಷ್ಟ ಜಾತಿ, ಪಂಗಡಗಳ ಆಯೋಗದ ಅಧ್ಯಕ್ಷ ಡಾ.ಮೂರ್ತಿ ಉದ್ಘಾಟಿಸಿದರು. ನಾಗೇಶ್, ಸತ್ಯನಾರಾಯಣ, ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಾಂತರಾಜು, ಕಾವೇರಿ, ಕೃಷ್ಣೇಗೌಡ, ಹನುಮಂತಯ್ಯ, ಚನ್ನಕೃಷ್ಣಯ್ಯ, ಲಿಂಗರಾಜು, ಮಹದೇವಸ್ವಾಮಿ, ಚಂದ್ರಶೇಖರ್, ಡಾ.ಅಶೋಕ್, ಐಸಾಕ್ ವರ್ಮಾ ಇತರರು ಇದ್ದರು.
Published on: 

ಮಳವಳ್ಳಿ: ವ್ಯಕ್ತಿತ್ವ ವಿಕಸನವಾಗಲು ಕ್ರೀಡೆ ಅತಿ ಮುಖ್ಯವಾಗಿದೆ. ಕ್ರೀಡೆ ಕೇವಲ ಆಟ ಮಾತ್ರವಲ್ಲದೆ ಮನುಷ್ಯನ ಮನೋಬಲ ಹೆಚ್ಚಿಸುವುದರ ಜತೆಗೆ ಓದುವಿಕೆ, ನಾಯಕತ್ವ ಗುಣಗಳನ್ನು ಬೆಳೆಸುತ್ತದೆ ಎಂದು ಅನುಸೂಚಿತ ಬುಡಕಟ್ಟು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಅಧ್ಯಕ್ಷ ಡಾ.ಮೂರ್ತಿ ಅಭಿಪ್ರಾಯಪಟ್ಟರು.

ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪಟ್ಟಣದ ಸಮೀಪದ ರಾಗಿಬೊಮ್ಮನಹಳ್ಳಿ ಗೇಟ್ ಬಳಿಯ ಎಂ.ಜೆ.ಎಕ್ಸಲೆನ್ಸ್ ಪಿಯು ಕಾಲೇಜಿನ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯಿಂದ ದೈಹಿಕ ಸಾಮರ್ಥ್ಯ, ಚಾಣಾಕ್ಷತನ ಹೆಚ್ಚುತ್ತದೆ. ಆದ್ದರಿಂದ ಓದಿನ ಜತೆಗೆ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಮಳವಳ್ಳಿ ತಾಲೂಕಿನ ವಿವಿಧ ಪಿಯು ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ನಾಗೇಶ್, ಸತ್ಯನಾರಾಯಣ, ಕ್ರೀಡಾ ಸಂಯೋಜಕ ಗುರುಸ್ವಾಮಿ, ರಾಜ್ಯ ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ಕಾಂತರಾಜು, ನೋಡಲ್ ಅಧಿಕಾರಿ ಕಾವೇರಿ, ಮುಖಂಡರಾದ ಕೃಷ್ಣೇಗೌಡ, ಹನುಮಂತಯ್ಯ, ಚನ್ನಕೃಷ್ಣಯ್ಯ, ಲಿಂಗರಾಜು, ಮಹದೇವಸ್ವಾಮಿ, ಚಂದ್ರಶೇಖರ್, ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ್, ಶೈಕ್ಷಣಿಕ ನಿರ್ದೇಶಕ ಐಸಾಕ್ ವರ್ಮಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net