ಶರಣ ಪರಂಪರೆ ಉಳಿಸಲು ಸಂಘಟಿತರಾಗಿ

ಮಳವಳ್ಳಿ ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ತೊಟ್ಟಿಮನೆ ಚನ್ನಪ್ಪ, ಕೆ.ಎಂ.ಬಾಲಚಂದ್ರ, ಸೋಮೇಶ್, ಬಿ.ಎಂ.ನಾಗರಾಜಪ್ಪ, ಪುಟ್ಟಬುದ್ದಿ,  ರಾಮಸ್ವಾಮಿ,  ಸಿ.ಜಿ.ಮಹೇಶ್, ತಾಂಡಮೂರ್ತಿ,  ಎಚ್.ಆರ್.ವಿಶ್ವ, ಅಭಿಜಿತ್,  ಶಂಭುಲಿಂಗಪ್ಪ, ಹಳದಾಸನಹಳ್ಳಿ ತಾಂಡವಮೂರ್ತಿ, ರಾಜು  ಅವರನ್ನು ಅಭಿನಂದಿಸಲಾಯಿತು.
ಮಳವಳ್ಳಿ ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ತೊಟ್ಟಿಮನೆ ಚನ್ನಪ್ಪ, ಕೆ.ಎಂ.ಬಾಲಚಂದ್ರ, ಸೋಮೇಶ್, ಬಿ.ಎಂ.ನಾಗರಾಜಪ್ಪ, ಪುಟ್ಟಬುದ್ದಿ, ರಾಮಸ್ವಾಮಿ, ಸಿ.ಜಿ.ಮಹೇಶ್, ತಾಂಡಮೂರ್ತಿ, ಎಚ್.ಆರ್.ವಿಶ್ವ, ಅಭಿಜಿತ್, ಶಂಭುಲಿಂಗಪ್ಪ, ಹಳದಾಸನಹಳ್ಳಿ ತಾಂಡವಮೂರ್ತಿ, ರಾಜು ಅವರನ್ನು ಅಭಿನಂದಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಬಸವ ಕೇಂದ್ರ ಅಧ್ಯಕ್ಷ ಡಿ.ಹಲಸಹಳ್ಳಿ ತೊಟ್ಟಿಮನೆ ಚನ್ನಪ್ಪ ಕರೆ
ಮಳವಳ್ಳಿ : ಹನ್ನೇರಡನೇ ಶತಮಾನದಲ್ಲೇ ಮನುಕುಲದ ಸಮಾನತೆಗೆ ಕಾಂತ್ರಿಕಾರಿ ಹೋರಾಟ ಮಾಡುವ ಮೂಲಕ ವಿಶ್ವಗುರು ಎನಿಸಿಕೊಂಡ ಬಸವೇಶ್ವರರ ಶರಣ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಬಸವ ತತ್ವ ಅನುಯಾಯಿಗಳು ಸಂಘಟಿತರಾಗುವಂತೆ ತಾಲೂಕು ಬಸವ ಕೇಂದ್ರ ಅಧ್ಯಕ್ಷ ಡಿ.ಹಲಸಹಳ್ಳಿ ತೊಟ್ಟಿಮನೆ ಚನ್ನಪ್ಪ ತಿಳಿಸಿದರು.
ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಬಸವ ಕೇಂದ್ರದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದರು.
ಬಸವ ಕೇಂದ್ರದ ಮೂಲಕ ಬಸವಣ್ಣನವರ ತತ್ವಾದರ್ಶಗಳನ್ನು ಯುವ ಪೀಳಿಗೆಗೆ ಪರಿಚಯಿಸಲು ಹಲವಾರು ಶರಣ ಸಂಸ್ಕೃತಿಯ ಕಾರ್ಯಕ್ರಮಗಳ ಯೋಜನೆ ರೂಪಿಸಲಾಗುವುದು. ಇದಕ್ಕೆ ಎಲ್ಲ ಪದಾಧಿಕಾರಿಗಳ ಸಹಕಾರ ಅಗತ್ಯ. ಬಸವಣ್ಣನ ಅನುಯಾಯಿಗಳಾಗಿ ಸಮಾಜದಲ್ಲಿ ಸಮಾನತೆ ಸಂದೇಶದ ಸಲಹಾ ಕಾರ್ಯಗಳನ್ನು ನಡೆಸುವ ಮೂಲಕ ಸುಭದ್ರ ಭಾರತ ನಿರ್ಮಾಣಕ್ಕಾಗಿ ಸಂಘಟಿತರಾಗೋಣ ಎಂದರು.
ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡುವುದರ ಜತೆಗೆ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಬೇಕು ಎಂದು ಆದೇಶವಿದ್ದರೂ ಕೆಲವು ಕಚೇರಿಗಳಲ್ಲಿ ಅಳವಡಿಕೆ ಮಾಡಿಲ್ಲ. ಒತ್ತಾಯದ ಮೂಲಕ ಅಳವಡಿಸುವ ಬದಲು ಆಡಳಿತ ವರ್ಗ ಹೆಮ್ಮೆಯಿಂದ ಅಳವಡಿಸಬೇಕೆಂದು ಆಗ್ರಹಿಸಿದರು.
ಪದಾಧಿಕಾರಿಗಳ ಆಯ್ಕೆ : ಇದೇ ಸಂದರ್ಭದಲ್ಲಿ ಗೌರವಾಧ್ಯಕ್ಷ ಕಿರುಗಾವಲು ಕೆ.ಎಂ.ಬಾಲಚಂದ್ರ, ಉಪಾಧ್ಯಕ್ಷ ಮಾಗನೂರು ಸೋಮೇಶ್, ಕಾರ್ಯಾಧ್ಯಕ್ಷ ದೊಡ್ಡಬೂವಳ್ಳಿ ಬಿ.ಎಂ.ನಾಗರಾಜಪ್ಪ, ವಿಶೇಷ ಸಲಹೆಗಾರ ಕುಂದೂರು ಪುಟ್ಟಬುದ್ದಿ, ಪ್ರಧಾನ ಕಾರ್ಯದರ್ಶಿಗಳಾಗಿ ದುಗ್ಗನಹಳ್ಳಿ ರಾಮಸ್ವಾಮಿ(ಸುನೀಲ್ ಕುಮಾರ್), ಕೋಶಾಧ್ಯಕ್ಷ ಚಿಕ್ಕಬಾಗಿಲು ಸಿ.ಜಿ.ಮಹೇಶ್, ನಿರ್ದೇಶಕರಾಗಿ ನಾರಾಯಣಪುರ ತಾಂಡಮೂರ್ತಿ, ಹಲಗೂರಿನ ಎಚ್.ಆರ್.ವಿಶ್ವ, ಅಭಿಜಿತ್, ಗೌಡಗೆರೆ ಶಂಭುಲಿಂಗಪ್ಪ, ಹಳದಾಸನಹಳ್ಳಿ ತಾಂಡವಮೂರ್ತಿ, ಬಿ.ಜಿ.ಪುರ ಗೌಡರ ರಾಜು, ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಬಸವಪ್ರಿಯ ನಾಗರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net