ಕಿಕ್ಕೇರಿ: ಸಮೀಪದ ವಡ್ಡರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಜೆಡಿಎಸ್ ಬೆಂಬಲಿತ 8 ಸದಸ್ಯರು ಆಯ್ಕೆಯಾಗಿದ್ದಾರೆ.
ಭಾನುವಾರ ಹಾಲು ಉತ್ಪಾದಕರ ಮಹಿಳಾ ಸಹಕಾರದ ಒಟ್ಟು 11 ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ನಿಗದಿಯಾಗಿತ್ತು. ಇದರಲ್ಲಿ ಜೆಡಿಎಸ್ ಬೆಂಬಲಿತ 8 ಸದಸ್ಯರು ವಿಜೇತರಾದರು. ಮನ್‌ಮುಲ್ ನಿರ್ದೇಶಕ ಡಾಲು ರವಿ ಬಣದ 3 ಸದಸ್ಯರು ಜಯಗಳಿಸಿದ್ದಾರೆ.
ನೂತನ ನಿರ್ದೇಶಕರಾಗಿ ಮಂಜುಳಾ, ರತ್ನಮ್ಮ, ಸೋಮಪ್ರಭ, ರತ್ನಮ್ಮ, ರೇವಮ್ಮ, ಭಾಗ್ಯಮ್ಮ, ಆಶಾ, ಸುಮಾ, ಪ್ರಮೀಳಾ, ಲೀಲಾವತಿ, ರತ್ನಮ್ಮ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಂತೋಷ್‌ಕುಮಾರ್ ಕಾರ್ಯನಿರ್ವಹಿಸಿದರು.
ನೂತನ ನಿರ್ದೇಶಕರ ಆಯ್ಕೆಗಾಗಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನೂತನ ನಿರ್ದೇಶಕರಿಗೆ ಶಾಸಕ ಎಚ್.ಟಿ.ಮಂಜು, ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಮಹದೇವೇಗೌಡ, ಅಲೋಕ್ ಕುಮಾರ್ ಇತರರು ಶುಭ ಕೋರಿದರು.