ಸಮರ್ಪಕ ನೀರು ಪೂರೈಕೆಗೆ ಆಗ್ರಹ

ಸಾದೊಳಲು ಗ್ರಾಪಂ ಬಳಿ ಎಸ್.ಸಿ.ಮಲ್ಲಯ್ಯ ನಗರ ನಿವಾಸಿಗಳ ಪ್ರತಿಭಟನೆ
ಸಮರ್ಪಕ ನೀರು
ಸಮರ್ಪಕ ನೀರು ಪೂರೈಕೆ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ತಾಲೂಕಿನ ಎಸ್.ಸಿ.ಮಲ್ಲಯ್ಯ ನಗರದ ನಿವಾಸಿಗಳು ಸಾದೊಳಲು ಗ್ರಾಪಂ ಬಳಿ ಪ್ರತಿಭಟನೆ ನಡೆಸಿದರು. ಶಿವಲಿಂಗಯ್ಯ, ಚನ್ನಾಜಮ್ಮ ವೆಂಕಟೇಶ್, ಸೋಮಾಚಾರಿ, ಶಿವಣ್ಣ, ಕಿರಣ್, ರವಿಕುಮಾರ್, ರಾಜೇಶ್, ಮಲ್ಲೇಶ್, ಸರೋಜಮ್ಮ, ಗೌರಮ್ಮ, ಶಾಂತಮ್ಮ ಇತರರು ಇದ್ದರು. ಸಮರ್ಪಕ ನೀರು
Published on: 

ಮದ್ದೂರು: ಮೂರು ತಿಂಗಳಿನಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ ಹಾಗೂ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ತಾಲೂಕಿನ ಎಸ್.ಸಿ.ಮಲ್ಲಯ್ಯ ನಗರದ ನಿವಾಸಿಗಳು ಸೋಮವಾರ ಸಾದೊಳಲು ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಮುಖಂಡ ಶಿವಣ್ಣ ಮಾತನಾಡಿ, ಸುಮಾರು 3 ತಿಂಗಳಿನಿಂದ ಸರಿಯಾಗಿ ನಮ್ಮ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ. ಕಳೆದ 15 ದಿನಗಳಿಂದಲು ನೀರು ಬಿಟ್ಟೇ ಇಲ್ಲ ಎಂದ ಅವರು, ಭಾನುವಾರ ಮಾತ್ರ ನೀರಿನ ಟ್ಯಾಂಕರ್ ಮೂಲಕ ನೀರು ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ದೀಪಾವಳಿ ಹಬ್ಬದಲ್ಲೂ ಕುಡಿಯುವ ನೀರಿಲ್ಲದೆ ಪರಿತಪಿಸಿದ್ದೇವೆ ಅಷ್ಟೇ. ಅಲ್ಲದೆ ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲವಾದ್ದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ ಎಂದ ಅವರು, ಗ್ರಾಮದಲ್ಲಿ ಸುಮಾರು 30 ವರ್ಷಗಳಿಂದ ವಾಸ ಮಾಡುತ್ತಿರುವವರಿಗೆ ಹಕ್ಕು ಪತ್ರಗಳನ್ನೇ ನೀಡದೆ ತೊಂದರೆ ಪಡುವಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಈ ಎಲ್ಲ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ಬೇಜವಾಬ್ದಾರಿ ತೋರುತ್ತಿದ್ದಾರೆ. ಅಷ್ಟೇ ಅಲ್ಲದೆ ತಾಲೂಕು ಕಚೇರಿಯ ಮುಂದೆಯೂ ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದರು. ಶೀಘ್ರ ನಮಗೆ ಕುಡಿಯವ ನೀರು, ಹಕ್ಕು ಪತ್ರ ಸೇರಿದಂತೆ ಇನ್ನಿತರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಸ್ಥಳಕ್ಕೆ ಪಿಡಿಒ ಹೇಮಾ ಆಗಮಿಸಿ, ಇನ್ನೆರಡು ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಗ್ರಾಮಸ್ಥರು ಹಿಂಪಡೆದರು. ಗ್ರಾಮದ ಮುಖಂಡರಾದ ಶಿವಲಿಂಗಯ್ಯ, ಚನ್ನಾಜಮ್ಮ ವೆಂಕಟೇಶ್, ಸೋಮಾಚಾರಿ, ಶಿವಣ್ಣ, ಕಿರಣ್, ರವಿಕುಮಾರ್, ರಾಜೇಶ್, ಮಲ್ಲೇಶ್, ಸರೋಜಮ್ಮ, ಗೌರಮ್ಮ, ಶಾಂತಮ್ಮ, ಲಕ್ಷ್ಮಿ, ಪಲ್ಲವಿ, ಭಾಗ್ಯಮ್ಮ ಇತರರು ಇದ್ದರು.