ಕೆ.ಆರ್.ಸಾಗರದಲ್ಲಿ ಮನ ಸೆಳೆದ ಬಾಲಮೇಳ

ಕೆ.ಆರ್.ಸಾಗರ ಸಂತೆಮಾಳದಲ್ಲಿರುವ ರಾಮಮಂದಿರ ಸಭಾಂಗಣದಲ್ಲಿ ಕೆ.ಆರ್.ಸಾಗರ ವ್ಯಾಪ್ತಿಯ ಅಂಗನವಾಡಿಗಳ ಬಾಲ ಮೇಳದಲ್ಲಿ ಮಕ್ಕಳಿಗೆ ವೇಷ ಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕೆ.ಆರ್.ಸಾಗರ ಸಂತೆಮಾಳದಲ್ಲಿರುವ ರಾಮಮಂದಿರ ಸಭಾಂಗಣದಲ್ಲಿ ಕೆ.ಆರ್.ಸಾಗರ ವ್ಯಾಪ್ತಿಯ ಅಂಗನವಾಡಿಗಳ ಬಾಲ ಮೇಳದಲ್ಲಿ ಮಕ್ಕಳಿಗೆ ವೇಷ ಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
Published on
ಕೆ.ಆರ್.ಸಾಗರ: ಮಹಿಳಾ ಮತ್ತು ಮ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮತ್ತು ಅಜೀಂ ಪ್ರೇಮ್‌ಜೀ ಫೌಂಡೇಷನ್ ವತಿಯಿಂದ ಕೆ.ಆರ್.ಸಾಗರ ಗ್ರಾಮದ ಸಂತೆಮಾಳದಲ್ಲಿರುವ ರಾಮಮಂದಿರ ಸಭಾಂಗಣದಲ್ಲಿ ಮಂಗಳವಾರ ಅಂಗನವಾಡಿ ಮಕ್ಕಳು ಹಾಗೂ ಪಾಲಕರಿಗೆ ಬಾಲ ಮೇಳ ಏರ್ಪಡಿಸಲಾಗಿತ್ತು.
ಕೆ.ಆರ್.ಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಚಾಲನೆ ನೀಡಿ ಮಾತನಾಡಿ, ಸರ್ಕಾರ ಅಂಗನವಾಡಿಗಳಲ್ಲಿ ನೀಡುವ ಕಲಿಕೆ ಮತ್ತು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಬೆಳಗೊಳ ಅಂಗನವಾಡಿ ವೃತ್ತದ ಮೇಲ್ವಿಚಾರಕಿ ಪುಷ್ಪಾವತಿ ಅಂಗನವಾಡಿಯಲ್ಲಿ ಸಿಗುವ ಸೌಲಭ್ಯಗಳು, ಕಲಿಕಾ ಪದ್ಧತಿ ಬಗ್ಗೆ ಸಮರ್ಪಕವಾಗಿ ವಿವರಿಸಿದರು.
ಅಜೀಂ ಪ್ರೇಮ್‌ಜಿ ಫೌಂಡೇಷನ್ ಮಂಡ್ಯ ಜಿಲ್ಲಾ ಘಟಕದ ಸಂಯೋಜಕ ತರಬೇತುದಾರ ರವಿಕುಮಾರ ಮಾತನಾಡಿ, ಪುಟ್ಟ ಮಕ್ಕಳ ಚಟುವಟಿಕೆಗಳಿಗೆ ಪೂರಕವಾದ ಸಾಮಗ್ರಿಗಳು ಎಲ್ಲ ಅಂಗವಾಡಿ ಕೇಂದ್ರದಲ್ಲಿವೆ. ಅಂಗವಾಡಿ ಕೇಂದ್ರ ನಿಮ್ಮ ಮಕ್ಕಳನ್ನು ಎರಡನೇ ತಾಯಿಯ ರೀತಿ ಪಾಲನೆ ಮಾಡುತ್ತಿದೆ. ಅಂಗವಾಡಿ ಕೇಂದ್ರಗಳು ಮಕ್ಕಳ ಬೆಳವಣಿಗೆಗೆ ಸದಾ ಸಕಾರಾತ್ಮಕ ದೃಷ್ಟಿ ಹೊಂದಿವೆ ಎಂದರು.
ಅಂಗನವಾಡಿ ಮಕ್ಕಳಿಗೆ ವಿವಿಧ ವೇಷ ಭೂಷಣ ಸ್ಪರ್ಧೆ, ನೃತ್ಯ ಸ್ಪರ್ಧೆ ನಡೆದವು. ಉಪಾಧ್ಯಕ್ಷ ಪಾಪಣ್ಣ, ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಅಂಗನವಾಡಿ ವೃತ್ತದ ಮೇಲ್ವಿಚಾರಕಿ ಪುಷ್ಪಾವತಿ, ಡಾ.ಸುದೀಪ್, ಜಿಲ್ಲಾ ತರಬೇತುದಾರ ರವಿಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರ ಕುಮಾರ್, ನರಸಿಂಹ, ಗ್ರಾಪಂ ಸದಸ್ಯೆ ಸುಧಾ, ರವಿ ಶಂಕರೇಗೌಡ, ವಸಂತ ಕುಮಾರ್, ಶಶಿಕಲಾ, ಶೃತಿ ಯೋಗೇಶ್, ಶೃತಿ ಶ್ರೀನಿವಾಸ್, ಮಂಜುಳಾ ದೇವರಾಜು, ಜಯದೀಪ್ ಸಿಂಗ್, ಕೆ.ಆರ್.ಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಜಯರಾಂ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net