ಸ್ಪಿಂಕ್ಲರ್ ಸೆಟ್, ಕೇಬಲ್ ಕದ್ದ ಆರೋಪಿ ಸೆರೆ

Man caught stealing sprinkler set, cable
Published on

ಲಕ್ಷ್ಮೇಶ್ವರ: ಸ್ಪಿಂಕ್ಲರ್ ಸೆಟ್‌ಗಳು ಮತ್ತು ಮೋಟರ್ ಕೇಬಲ್ ಕಳವು ಮಾಡಿದ್ದ ಆರೋಪಿ ಬಂಧಿಸಿ, ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವಲ್ಲಿ ಸ್ಥಳೀಯ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸಬ್ ಇನ್‌ಸ್ಪೆಕ್ಟರ್‌ಗಳಾದ ಯೊಸೆಫ್ ಜಮೂಲಾ ಹಾಗೂ ವಿ. ಜಿ. ಪವಾರ ನೇತೃತ್ವದಲ್ಲಿ ಸಿಬ್ಬಂದಿ ಡಿ.ಎಸ್.ನದಾಫ, ಜಿ.ಆರ್. ಗ್ರಾಮಪುರೋಹಿತ ಹಾಗೂ ಇತರರ ಪೊಲೀಸರು ಶನಿವಾರ ಬೆಳಗಿನ ಜಾವ ಒಡೆಯರಮಲ್ಲಾಪೂರದ ಹೊನ್ನಪ್ಪ ಮರಿಯಪ್ಪ ಇಂಗಳಗೊಂದಿಯನ್ನು ಹಿಡಿದು ವಿಚಾರಣೆ ಮಾಡಿದ್ದಾರೆ. ಆಗ ಆತ ಕಳವು ಮಾಡಿರುವ ಕುರಿತು ಒಪ್ಪಿಕೊಂಡಿದ್ದಾನೆ.

ಬಾಲೇಹೊಸೂರ ಗ್ರಾಮದ ಕೊಟ್ರಸ್ವಾಮಿ ವೃಷಬೇಂದ್ರಯ್ಯ ಡೋಣಿಕಲ್ಲುಬೆಣ್ಣಿಮಠ ಅವರ ಜಮೀನಿನಲ್ಲಿಯ ಸುಮಾರು 120 ಮೀಟರ್ ಉದ್ದದ ಮೋಟರ್ ಕೇಬಲ್, 36 ಸ್ಪಿಂಕ್ಲರ್ ಸೆಟ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾಗಿ ಆರೋಪಿತ ಬಾಯ್ಬಿಟ್ಟಿದ್ದಾನೆ. ಆರೋಪಿಯಿಂದ 36 ಸ್ಪಿಂಕ್ಲರ್ ಸೆಟ್‌ಗಳು ಹಾಗೂ 120 ಮೀಟರ್ ಮೋಟರ್ ಕೇಬಲ್ ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net