ಬಡವರಿಗೆ ದಾನ ನೀಡುವುದನ್ನು ರೂಢಿಸಿಕೊಳ್ಳಿ

D.9MDG-1P1
Published on

ಮೂಡಿಗೆರೆ: ಪಟ್ಟಣದ ಶಾದಿ ಮಹಲ್ನಲ್ಲಿ ನಡೆದ ಮಲ್ನಾಡ್ ಗಲ್ಫ್ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ವಲಯದ ಮಹಾಸಭೆಯಲ್ಲಿ 39 ನೂತನ ಸದಸ್ಯರನ್ನು ಆಯ್ಕೆಮಾಡಲಾಯಿತು.

ಟ್ರಸ್ಟ್ ರಾಷ್ಟ್ರೀಯ ಅಧ್ಯಕ್ಷ ಅಕ್ರಂ ಹಾಜಿ ಮಾತನಾಡಿ, ಕರ್ನಾಟಕದಿಂದ ವಿವಿಧ ದೇಶಗಳಿಗೆ ಉದ್ಯೋಗಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಜನ ತೆರಳಿದ್ದಾರೆ. ಅಲ್ಲಿ ಉದ್ಯೋಗದಲ್ಲಿರುವವರು ತಾಯಿ ನಾಡಿಗೆ ಕೊಡುಗೆ ನೀಡಲು 2014ರಲ್ಲಿ ಗಲ್ಫ್ ಮತ್ತು ಭಾರತದಲ್ಲಿ ಟ್ರಸ್ಟ್ ಸ್ಥಾಪಿಸಲಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ದುಡಿದು ಸಂಪಾದಿಸಿದ ಹಣದಲ್ಲಿ ಒಂದಷ್ಟು ಉಳಿತಾಯ ಮಾಡಿ ಟ್ರಸ್ಟಿಗೆ ಹಸ್ತಾಂತರಿಸುತ್ತಿದ್ದಾರೆ. ಇದರಿಂದ ಭಾರತದಲ್ಲಿರುವ ಕಡು ಬಡ ಕುಟುಂಬಗಳನ್ನು ಗುರುತಿಸಿ ಅವರ ಮಕ್ಕಳ ಶಿಕ್ಷಣಕ್ಕೆ ನೀಡಲಾಗುತ್ತಿದೆ ಎಂದರು.

ದುಡಿದು ಸಂಪಾದಿಸಿದ ಹಣದಲ್ಲಿ ಬಡವರಿಗೆ ದಾನ ನೀಡಿದವರು ಮತ್ತು ಪಡೆದವರು ಎಲ್ಲಿಯೂ ಬಡವರಾಗುವುದಿಲ್ಲ. ಆರ್ಥಿಕವಾಗಿ ಇನ್ನಷ್ಟು ಸಬಲರಾಗುತ್ತಾರೆ. ಉಳ್ಳವರು ಬಡವರಿಗೆ ದಾನ ನೀಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು. ಟ್ರಸ್ಟ್ ವಲಯಾಧ್ಯಕ್ಷ ಭೂತನಕಾಡು ಇಸಾಕ್ ಹಾಜಿ ಮಾತನಾಡಿ, ಕಳೆದ ಮೂರು ವರ್ಷದಿಂದ ಹಲವು ಮಂದಿ ಅನಾರೋಗ್ಯ ಪೀಡಿತರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡಲಾಗಿದೆ. ಟ್ರಸ್ಟ್ ಕೇಂದ್ರ ಸಮಿತಿಯಿಂದ ಚಕ್ಕಮಕ್ಕಿ ಗ್ರಾಮದಲ್ಲಿ 4 ಎಕರೆ ಜಾಗ ಖರೀದಿಸಲಾಗಿದೆ. ಅಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.

ರಾಷ್ಟ್ರೀಯ ಸಮಿತಿ ಸದಸ್ಯರಾದ ಪಿ.ಕೆ.ಹಮೀದ್, ಹಸನಬ್ಬ ಕೊಟ್ಟಿಗೆಹಾರ, ಪಿ.ಕೆ.ಹನೀಫ್, ವಲಯ ಘಟಕದ ಪದಾಧಿಕಾರಿಗಳಾದ ಹುಸೇನ್ ಪಾಷ, ಅಬ್ದುಲ್ ಲತೀಫ್, ಶಬ್ಬೀರ್‌ಅಹ್ಮದ್ ಬೇಗ್, ಫಾರೂಕ್, ಅಬ್ದುಲ್ ರಜಾಕ್, ಇಬ್ರಾಹಿಂ ಶಾಲಿಮಾರ್, ಕಿರುಗುಂದ ಅಬ್ಬಾಸ್, ಶಾಹುಲ್, ಎ.ಸಿ.ಅಯ್ಯೂಬ್, ಹಾಜಿ, ಮಹಮ್ಮದ್ ಅಲಿ, ಮೈದಿನ್ ಸೇಟ್, ಎಂ.ಎಸ್.ಇಬ್ರಾಹಿಂ, ರಿಜ್ವಾನ್ ಅಲಿ, ಬಿ.ಎ.ಉಮರ್, ಕೆ.ಪಿ.ಖಾಲಿದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net