ಮಕ್ಕಳಿಗೆ ಧರ್ಮ, ಸಂಸ್ಕೃತಿ ಅರಿವು ಮೂಡಿಸಿ

shashi web 1
Published on

ತಾಲೂಕು ಆಡಳಿತದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಯೋಜನೆ

ಮಾಲೂರು :  ಸಮಾಜದಲ್ಲಿ ಪಾಲಕರು ತಮ್ಮ ಮಕ್ಕಳ ಕೈಯಲ್ಲಿ ಮೊಬೈಲ್​ ನೀಡುವ ಬದಲು ಧರ್ಮ ಸಂಸ್ಕೃತಿಯ ಬಗ್ಗೆ ಮನವರಿಕೆ ಮಾಡಿ ಹೆಚ್ಚು ಜ್ಞಾನವಂತರಾಗಲು ಪ್ರೇರೇಪಿಸಬೇಕು ಎಂದು ತಹಸೀಲ್ದಾರ್​ ಎಂ.ವಿ.ರೂಪಾ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯ ಸಭಾಭವನದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಮಾತನಾಡಿ, ಶ್ರೀ ಕೃಷ್ಣ ಪರಮಾತ್ಮನು ಸಮಾಜಕ್ಕೆ ನೀಡಿರುವ ಸಂದೇಶಗಳನ್ನು ಸಮಾಜದಲ್ಲಿರುವ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಯಾದವ ಸಂಘವು ನೀಡಿರುವ ಮನವಿಯಂತೆ ಇಸ್ಕಾನ್​ ಸಂಸ್ಥೆಯವರಿಗೆ ಶ್ರೀ ಕೃಷ್ಣದೇವಾಲಯ ನಿರ್ಮಿಸಲು ಬೇಕಾಗಿರುವ 5 ಎಕರೆ ಭೂವಿ ನೀಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.

ತಾಲೂಕು ಯಾದವ ಗೊಲ್ಲರ ಸಂಘದ ಅಧ್ಯಕ್ಷ ಎ.ವೈ. ಗೋವಿಂದಪ್ಪ ಮಾತನಾಡಿ, ಶ್ರೀ ಕೃಷ್ಣಪರಮಾತ್ಮನು ಒಂದು ಸಮಾಜಕ್ಕೆ ಸೀಮಿತವಲ್ಲ. ಇಡೀ ಜಗತ್ತಿಗೆ ಸೀಮಿತ. ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಜಗತ್ತಿನೆಲ್ಲಡೆ ಆಚರಣೆ ಮಾಡುತ್ತಿದ್ದಾರೆ. ಆಚರಣೆಯಿಂದ ನಾವು ನಮ್ಮ ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿದಂತಾಗುತ್ತದೆ. ಮಾಲೂರಿನಲ್ಲಿ ಇಸ್ಕಾನ್​ ಸಂಸ್ಥೆಯವರಿಗೆ ಶ್ರೀ ಕೃಷ್ಣನ ದೇವಾಲಯ ನಿರ್ಮಿಸಲು 5 ಎಕರೆ ಭೂಮಿ ನೀಡಬೇಕು ಎಂದು ತಹಸೀಲ್ದಾರ್​ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ತಾಲೂಕು ಕಚೇರಿ ಮುಂಭಾಗದಲ್ಲಿ ಶ್ರೀ ಕೃಷ್ಣನ ಉತ್ಸವ ಮೂರ್ತಿಯನ್ನು ಮಲ್ಲಿಗೆ ಹೂವಿನ ಪಲ್ಲಕ್ಕಿಯಲ್ಲಿಟ್ಟು ತಾಲೂಕಿನಾದ್ಯಂತ ಎಲ್ಲಗ್ರಾಮ ಪಂಚಾಯಿತಿಗಳಿಂದ ವಿಶೇಷ ಅಲಂಕಾರ ಸಹಿತ ಆಗಮಿಸಿದ್ದ ಪಲ್ಲಕ್ಕಿಗಳ ಮೆರವಣಿಗೆಗೆ ತಹಸೀಲ್ದಾರ್​ ಎಂ.ವಿ.ರೂಪಾ ಚಾಲನೆ ನೀಡಿದರು.

ಮೆರವಣಿಗೆಯು ಪಟ್ಟಣದ ರಾಜ ಬೀದಿಗಳಲ್ಲಿ ಸಂಜೆಯವರೆಗೆ ನಡೆಯಿತು. ಮೆರವಣಿಗೆ ವೇಳೆ ಸಾರ್ವಜನಿಕರು ಶ್ರೀಕೃಷ್ಣನ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ಊಟದ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಕೇರಳದ ಚೆಂಡಿ ಮೇಳ ಸೇರಿ ಅನೇಕ ಸಾಂಸತಿಕ ಕಲಾತಂಡಗಳು ಮೇಳೈಸಿದವು.

ಮಾಲೂರು ತಾಲೂಕು ಯಾದವ ಯುವ ವೇದಿಕೆಯ ಅಧ್ಯಕ್ಷ ಹರೀಶ್​, ಪುರಸಭೆ ಮಾಜಿ ಸದಸ್ಯೆ ಪದ್ಮಾವತಿ, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ತಾಲೂಕು ಯಾದವ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್​ ಕುಮಾರ್​, ಯಾದವ ಯುವ ವೇದಿಕೆ ರಾಜ್ಯ ಉಪಾಧ್ಯಕ್ಷ ಮನೋಹರ್​ ಯಾದವ್​, ಪದಾಧಿಕಾರಿಗಳಾದ ಚಂದ್ರಶೇಖರ್​ ಯಾದವ್​, ಚಂದ್ರಶೇಖರ್​ ಬಾಬು, ನವೀನ್​ ಕುಮಾರ್​, ಮಧುಸೂದನ್​, ಸಂಪತ್​, ನರಸಿಂಹಮೂರ್ತಿ, ಸಂಜೀವಪ್ಪ, ಮುರಳಿ ಯಾದವ್​, ವೆಂಕಟಸ್ವಾಮಿ, ನಾಗೇಶ್​, ಮಂಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net