ಮೆಚ್ಚುಗೆ ಪಡೆದ ಮಹಿಷಾಸುರ ಮರ್ದಿನಿ ಬಯಲಾಟ

Mahishasura Mardini Bayalata
Published on

ರಟ್ಟಿಹಳ್ಳಿ: ತಾಲೂಕಿನ ಶಿರಗಂಬಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ರಾತ್ರಿ ಆಯೋಜಿಸಿದ್ದ ಗದಗಿನ ಅಶೋಕ ಸುತಾರ ಕಲಾತಂಡದ ಮಹಿಷಾಸುರ ಮರ್ದಿನಿ ಬಯಲಾಟ ಪ್ರದರ್ಶನ ಎಲ್ಲರ ಮೆಚ್ಚುಗೆ ಪಡೆಯಿತು.

ದುಷ್ಟರ ಸಂಹಾರ ಶಿಷ್ಟರ ರಕ್ಷಣೆ ಎಂಬ ಆಧ್ಯಾತ್ಮಿಕ ಕಥಾವಸ್ತುವುಳ್ಳ ಮಹಿಷಾಸುರ ಮರ್ದಿನಿ ಬಯಲಾಟ ಉತ್ತಮವಾಗಿ ಪ್ರದರ್ಶನಗೊಂಡಿತು. ಬಯಲಾಟದಲ್ಲಿ ಶಕ್ತಿ ದೇವತೆಯ ವಿವಿಧ ಅವತಾರಗಳನ್ನು ಕಲಾವಿದರು ಪ್ರದರ್ಶಿಸಿದರು.

ಭಾಗವತರು ಅಶೋಕ ಸುತಾರ, ಪಾತ್ರವರ್ಗದಲ್ಲಿ ಶಂಕ್ರಪ್ಪ ಬಡಿಗೇರ, ರವಿ ಕೊಳ್ಳಿ, ಗಣೇಶ ರಜಪೂತ, ಸಂಕರ ರಜಪೂತ, ಕೇಶವ ಕಮ್ಮಾರ, ನಿಜಲಿಂಗಪ್ಪ ಕರಿಬಿಷ್ಟಿ, ಬಾಳಪ್ಪ, ಅಮರಶ, ನಿಖಿತಾ, ಇತರೆ ಕಲಾವಿದರು ಬಯಲಾಟ ಪ್ರದರ್ಶಿಸಿದರು. ನಿವೃತ್ತ ಶಿಕ್ಷಕ ಬಸಯ್ಯ ಬಣಕಾರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net