ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಗೆ ಮಹಾಭಿಷೇಕ

BYD LAXMI VENKATESH
Published on

ಬ್ಯಾಡಗಿ: ವೈಕುಂಠ ಏಕಾದಶಿ ಅಂಗವಾಗಿ ಪಟ್ಟಣದ ನಿಸರ್ಗನಗರದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಜ. 10ರಂದು ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಶಾಲಿವಾಹನ ಶಕೆ 1945ನೇ ಕ್ರೋಧಿನಾಮ ಸಂವತ್ಸರ ಪುಷ್ಯ ಮಾಸ ಶುಕ್ಲಪಕ್ಷ ಏಕಾದಶಿ ದಿನವಾದ ಬೆಳಗ್ಗೆ 5 ಗಂಟೆಗೆ ವೆಂಕಟೇಶ್ವರ ಸ್ವಾಮಿಗೆ ಮಹಾಭಿಷೇಕ, 6 ಗಂಟೆಗೆ ಮಂಗಳ ವಾದ್ಯಗಳೊಂದಿಗೆ ಉತ್ಸವ ಮೂರ್ತಿ ಪ್ರದಕ್ಷಿಣೆ, 9 ಗಂಟೆಗೆ ವೈಕುಂಠ ಮಹಾದ್ವಾರದಲ್ಲಿ ಶ್ರೀದೇವಿ, ಭೂದೇವಿ ಸಮೇತ ವೆಂಕಟೇಶ್ವರ ಸ್ವಾಮಿಯ ಚರ ಪ್ರತಿಷ್ಠಾಪನೆ, ಸಂಜೆ 5 ಗಂಟೆಗೆ ಮಹಿಳೆಯರಿಂದ ಭಜನಾ ಸೇವೆ ಹಾಗೂ ವೈಕುಂಠ ದ್ವಾರದ ಮೂಲಕ ತಿಮ್ಮಪ್ಪನ ದರ್ಶನ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net