ಆರೋಪಿಗಳನ್ನು ಬಂಧಿಸದ ಪೊಲೀಸರ ವಿರುದ್ಧ ಕ್ರಮವಾಗಲಿ

lng-1
ಲಿಂಗಸುಗೂರಿನಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ, ಪ್ರಮುಖರಾದ ಅಪ್ಪಣ್ಣ ಕಾಂಬಳೆ, ಚನ್ನಬಸವ, ನಿಂಗಪ್ಪ, ಆಂಜನೇಯ, ಹನುಮಂತ ಛಲವಾದಿ, ಮಹಾಂತೇಶ ಬುದ್ದಿನ್ನಿ ಇತರರಿದ್ದರು.
Published on

ಲಿಂಗಸುಗೂರು: ವರದಕ್ಷಿಣೆ ಮತ್ತು ಮಕ್ಕಳಾಗಿಲ್ಲವೆಂಬ ಕಿರುಕುಳ ತಾಳದೆ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಪ್ರಮುಖರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಎಸಿ ಕಚೇರಿ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಮನವಿ ಸಲ್ಲಿಸಿದರು.

ಸುನೀಲ್ ಸುಗೂತೆಕರ್ ಎಂಬುವರ ಜತೆ ಶಾಂತಲಾ (22) ವಿವಾಹವಾಗಿತ್ತು. ಮದುವೆ ಬಳಿಕ ವರದಕ್ಷಿಣೆ ಕಿರುಕುಳ ಮತ್ತು ಮಕ್ಕಳಾಗಿಲ್ಲವೆಂಬ ಕಾರಣಕ್ಕೆ ಆಕೆಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರಿಂದ ಆರೋಗ್ಯ ಹದಗೆಟ್ಟು ಶಾಂತಲಾ ಸಾವಿಗೀಡಾದ ಕುರಿತು ಏ. 9 ರಂದು ಮೃತಳ ತಂದೆ ದಶರಥ ಪಾಚಂಗಿ ಲಿಂಗಸುಗೂರು ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿ ಒಂದು ತಿಂಗಳಾದರೂ ಆರೋಪಿಗಳನ್ನು ಬಂಧಿಸದ ಪೊಲೀಸರ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ, ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ, ಪ್ರಮುಖರಾದ ಶ್ರೀಧರ, ಖಾಜಾ ಮೈನುದ್ದಿನ್, ಬಾಬಾಜಾನಿ, ಶಂಷುದ್ದೀನ್, ನಾರಾಯಣ, ತುಕಾರಾಮ್, ಶಂಕರ್, ಸುನೀಲ್, ಅನೀಲ್, ನಾಮದೇವ, ಕೃಷ್ಣ, ದೇವು ಶಿಂಧೆ, ಬಾಲಕೃಷ್ಣ, ಶಾಂತ ಕುಮಾರಿ, ಸಾಹೀರಾ ಬಾನು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net