ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

web 66
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮನೆ ಹಿತ್ತಲಿನಲ್ಲಿ ಕಸ ಚೆಲ್ಲುವ ವಿಚಾರಕ್ಕೆ ಸಂಬ0ಧಿಸಿ ನಗರದ ಹಾವೇರಿಪೇಟೆಯ ಕುರುಬರ ಓಣಿಯಲ್ಲಿ ನಡೆದಿದ್ದ ವೃದ್ಧೆಯ ಕೊಲೆ ಆರೋಪಿಗಳಿಗೆ 4ನೇ ಜಿಲ್ಲಾ ಸತ್ರ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಗಂಗಮ್ಮ ಕದಂ ಎಂಬುವರನ್ನು ಸಂಬ0ಧಿಽಕರು 2016ರಲ್ಲಿ ಕೊಲೆ ಮಾಡಿದ್ದರು. ಕಸ ಚೆಲ್ಲುವ ವಿಚಾರಕ್ಕೆ ಜಗಳ ನಡೆದು ಗಂಗಮ್ಮಳ ಸಂಬ0ಧಿಕರಾದ ಮಂಜುನಾಥ, ಬಸವರಾಜ, ಯಲ್ಲಪ್ಪ, ಲಲಿತಾ ಹಾಗೂ ಕಮಲಾ ಎಂಬುವರು ಕೊಡಲಿ ಹಾಗೂ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಉಪನಗರ ಠಾಣೆ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net