ಗ್ರಂಥಪಾಲಕರ ಕಾರ್ಯಕ್ಕೆ ನ್ಯಾಕ್ ತಂಡ ಮೆಚ್ಚುಗೆ

18SND-01
Published on

ಸಿಂಧನೂರು: ನಗರದ ಸರ್ಕಾರಿ ಮಹಾವಿದ್ಯಾಲಯದ ಗ್ರಂಥಾಲಯದಿಂದ ಪ್ರತಿ ವರ್ಷ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗೆ ಬೆಸ್ಟ್ ಲೈಬ್ರರಿ ಯೂಸರ್ ಅವಾರ್ಡ್ ನೀಡಿರುವುದು, ಗ್ರಂಥಪಾಲಕ ಯಲ್ಲಪ್ಪ ಕಾರ್ಯ ಹಾಗೂ ಗ್ರಂಥಾಲಯದ ಸಮರ್ಥ ನಿರ್ವಹಣೆಗೆ ನ್ಯಾಕ್ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಇತ್ತೀಚೆಗೆ ಸರ್ಕಾರಿ ಮಹಾವಿದ್ಯಾಲಯಕ್ಕೆ ಆಗಮಿಸಿದ್ದ ನ್ಯಾಕ್ ತಂಡ ಗ್ರಂಥಾಲಯ ಕಾರ್ಯನಿರ್ವಹಣೆ ಪರಿಶೀಲಿಸಿತ್ತು. ಸುವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ಓದಲು ಪ್ರೇರಣೆ ನೀಡಿರುವುದನ್ನು ಗಮನಿಸಿ, ನ್ಯಾಕ್ ವರದಿಯಲ್ಲಿ ಶ್ಲಾಘಿಸಲಾಗಿದೆ. ಈ ಕಾರಣಕ್ಕಾಗಿ ಗ್ರಂಥಪಾಲಕ ಯಲ್ಲಪ್ಪ ಅವರಿಗೆ ಸರ್ಕಾರಿ ಮಹಾವಿದ್ಯಾಲಯದ ಪ್ರಾಚಾರ್ಯ ಚನ್ನಬಸಪ್ಪ ಚಿಲ್ಕರಾಗಿ ಪ್ರಶಂಸನಾ ಪತ್ರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net