ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದಿರಲಿ

2 KHP 01
ಕಾನಹೊಸಹಳ್ಳಿ ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಶಾರದ ಆಶ್ರಮದ ಮಾತಾಜೀ ಪ್ರಮೋದಮಯಿ ಉದ್ಘಾಟಿಸಿದರು. ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಂ.ಶಶಿಧರ ಸ್ವಾಮಿ, ಕಾರ್ಯದರ್ಶಿ ಹರ್ಷವರ್ಧನ್ ಇದ್ದರು.
Published on

ಕಾನಹೊಸಹಳ್ಳಿ: ಆಧ್ಯಾತ್ಮಿಕ ಚಿಂತಕ ಸ್ವಾಮಿ ವಿವೇಕಾನಂದ ಸೇರಿ ಮಹನೀಯರ ಆದರ್ಶಗಳನ್ನು ಇಂದಿನ ಪೀಳಿಗೆ ಪಾಲಿಸಬೇಕು ಎಂದು ಹೊಸಪೇಟೆ ಹಂಸಾಂಭ ಶಾರದಾಶ್ರಮದ ಮಾತಾಜಿ ಪ್ರಮೋದಮಯಿ ಹೇಳಿದರು.

ಕಾನಹೊಸಹಳ್ಳಿ ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳ ಮನಸು ಬಹಳ ವಿಶಾಲವಾದದ್ದು, ಏನನ್ನು ಬಿತ್ತುತ್ತೆವೆಯೋ ಅದೇ ಬೆಳೆಯುತ್ತದೆ.

ಅಮೂಲ್ಯವಾದ ವಿದ್ಯಾರ್ಥಿ ಜೀವನದಲ್ಲಿ ದುಶ್ಚಟಗಳ ದಾಸರಾಗದೇ, ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು. ಸಂಸ್ಕಾರವಂತರಾಗಲು ವಿದ್ಯಾರ್ಥಿ ಸಮಾಜಿಕ ಚಿಂತನೆ ಜತೆ ಧಾರ್ಮಿಕ ಚಿಂತನೆಗಳನ್ನು ಪಾಲಿಸಬೇಕು ಎಂದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಂ.ಶಶಿಧರ ಸ್ವಾಮಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಹೊರತೆಗೆಯುವ ಕೆಲಸ ಶಿಕ್ಷಕರಿಂದಾಗಬೇಕು. ಆ ನಿಟ್ಟಿನಲ್ಲಿ ಶಿಕ್ಷಕರು ಶ್ರಮವಹಿಸಬೇಕು ಎಂದರು.

ಕಾರ್ಯದರ್ಶಿ ಹರ್ಷವರ್ಧನ ಮುಖ್ಯಶಿಕ್ಷಕಿ ನಗ್ಮಾ, ಶಿಕ್ಷಕರಾದ ಸಜೀತಾ, ವಾತ್ಸಲ್ಯ, ಸಂಗೀತಾ, ಮಂಜುಳಾ, ಆಶಾ, ನಾಗೇಶ, ದಂಡೆಪ್ಪ, ವಿಜಯಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net