

ಅಥಣಿ: ಮಾದಕ ವಸ್ತುಗಳ ಸೇವನೆಯಿಂದ ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ. ಇದು ಸಮಾಜ ಮತ್ತು ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಬಸವತತ್ತ್ವ ಪ್ರಸಾರ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು.
ತಾಲೂಕಿನ ಮಿನಿ ವಿಧಾನಸೌಧದಲ್ಲಿ ತಾಲೂಕಾಡಳಿತದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ವ್ಯಸನಮುಕ್ತ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ದುಶ್ಚಟಕ್ಕೆ ಬಲಿಯಾಗುತ್ತಿರುವ ಯುವಕರನ್ನು ಸನ್ಮಾರ್ಗದಲ್ಲಿ ನಡೆಸುವುದು ಅಗತ್ಯ. ಈ ನಿಟ್ಟಿನಲ್ಲಿ ಸವದಿ ಮತ್ತು ಇಳಕಲ್ ಮಠದ ಲಿಂಗೈಕ್ಯ ಮಹಾಂತಪ್ಪಗಳ ಬದುಕು ನಮ್ಮೆಲರಿಗೆ ಆದರ್ಶವಾಗಬೇಕು ಎಂದರು.
ವಕೀಲ ಧರೆಪ್ಪ ಠಕ್ಕಣ್ಣವರ, ಉಪತಹಸೀಲ್ದಾರ್ ಎಂ.ಎಂ.ಬಿರಾದಾರ ಮಾತನಾಡಿದರು. ಹಿರಿಯ ಉಪನೋಂದಣಾಧಿಕಾರಿ ಎಸ್.ಎಂ.ಹಿಮೇಶ, ಸಮಾಜ ಕಲ್ಯಾಣಾಧಿಕಾರಿ ಪರಶುರಾಮ ಪತ್ತಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮಂಜುನಾಥ ಸೌಂದಲೆಗೆಕರ, ನೀರಾವರಿ ಅಧಿಕಾರಿ ಪ್ರವೀಣ ಹುಣಸಿಕಟ್ಟಿ, ಡಾ.ಸುರೇಶ ಮೈಗೂರ, ಎನ್.ಎಂ.ನಾಮದಾರ, ಸಂಗಣ್ಣ ಗೂಗವಾಡ, ಸುನಿತಾ ನವಲಗುಂದ, ಸುಮಿತ ಮರನೂರ ಇತರರಿದ್ದರು.