ಕನ್ನಡ ಉಳಿಸಿ, ಬೆಳೆಸಲು ಕಂಕಣಬದ್ಧರಾಗೋಣ

mnd Kasapa
Published on

ಮುಂಡಗೋಡ: ಕನ್ನಡ ಉಳಿಸಿ ಬೆಳೆಸಲು ನಾವೆಲ್ಲರೂ ನಿರಂತರವಾಗಿ ಶ್ರಮಿಸಬೇಕು. ಕನ್ನಡಕ್ಕಾಗಿ ಕಂಕಣ ಬದ್ಧರಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ವಸಂತ ಕೊಣಸಾಲಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್​ನ 111ನೇ ವರ್ಷದ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್.ಕೆ. ಬೋರರ್ಕರ್, 1915ರಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರ ನೇತೃತ್ವದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಎಂದು ನಾಮಕರಣವಾಗಿತ್ತು. ಕನ್ನಡ ಭಾಷೆ, ನೆಲ, ಜಲ ಕಾಪಾಡುವುದು ಕಸಾಪ ಮೂಲ ಉದ್ದೇಶವಾಗಿದೆ ಎಂದರು. ಶಿಕ್ಷಕ ಬಾಲಚಂದ್ರ ಹೆಗಡೆ ಉಪನ್ಯಾಸ ನೀಡಿದರು.

ಶಿವಾನಂದ ವಾಲಿಶೆಟ್ಟರ್, ಡಾ.ಪಿ.ಪಿ. ಛಬ್ಬಿ, ಎನ್.ಎಸ್. ಸುರಗೋಡ, ಎಸ್.ಬಿ. ಹೂಗಾರ, ನಾಗರಾಜ ಅರ್ಕಸಾಲಿ, ಆನಂದ ಹೊಸೂರ, ರಾಜಶೇಖರ ನಾಯ್ಕ, ರಾಮಣ್ಣ, ಗೌರಮ್ಮ ಕೊಳ್ಳಾನವರ, ಮಲ್ಲಮ್ಮ ನೀರಲಗಿ, ಎಚ್.ಎನ್. ತೆಪೆಲಿ, ಸುರೇಶ ಓಣಿಕೇರಿ, ಎಸ್.ಎಸ್. ರೆವಣಕರ, ಎಸ್.ಡಿ. ಮುಡೆಣ್ಣವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net