ಯುವಜನರು ಜಾನಪದ ಕಲೆ ಬೆಳೆಸಲಿ

kls janapada
ಕಳಸದ ಕಲ್ಮಕ್ಕಿಯಲ್ಲಿ ಜಾನಪದ ಕಲಾವಿದ ಕುಕ್ಕೋಡು ಮಂಜೇಗೌಡ, ಸೌಮ್ಯಾ ಅವರನ್ನು ಗೌರವಿಸಲಾಯಿತು.
Published on

ಕಳಸ: ಯುವ ಸಮುದಾಯ ಜಾನಪದ ಕಲಾ ಪ್ರಕಾರಗಳನ್ನು ಸಂರಕ್ಷಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ರಜಿತ್ ಕೆಳಗೂರ್ ಹೇಳಿದರು.

ಜಾನಪದ ಪರಿಷತ್ ಕಳಸ ತಾಲೂಕು ಹಾಗೂ ಜ್ಞಾನ ವಿಜ್ಞಾನ ಸಮಿತಿಯಿಂದ ಸೋಮವಾರ ಕಲ್ಮಕ್ಕಿಯಲ್ಲಿ ಆಯೋಜಿಸಿದ್ದ ಜಾನಪದ ಜಗಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಕರು ಪಟ್ಟಣದಲ್ಲಿ ಉದ್ಯೋಗದಲ್ಲಿದ್ದರೂ ಹಳ್ಳಿಯ ಜಾನಪದ ಕಲೆಗಳನ್ನು ಮುಖ್ಯ ವೇದಿಕೆಗೆ ಪರಿಚಯಿಸಿ ಜಾನಪದ ಉಳಿಸಬೇಕು ಎಂದು ಹೇಳಿದರು.
ಜ್ಞಾನ ವಿಜ್ಞಾನ ಸಮಿತಿ ಸಂಯೋಜಕ ಸಂದೇಶ್ ಮಾತನಾಡಿ, ಜಾನಪದ ಕಲೆ ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆ ವಿಷಯ. ಜಾನಪದ ಕಲೆಗಳು ಇನ್ನಷ್ಟು ಬೆಳಕಿಗೆ ಬಂದು ಮಲೆನಾಡಿನ ಮೂಲ ಜಾನಪದ ಕಲೆಗಳು ಉಳಿಯಲಿ ಎಂದು ಆಶಿಸಿದರು.
ಜಾನಪದ ಕಲಾವಿದರಾದ ಕುಕ್ಕೋಡು ಮಂಜೇಗೌಡ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೌಮ್ಯಾ ಅವರನ್ನು ಸನ್ಮಾನಿಸಲಾಯಿತು. ಜ್ಞಾನ ವಿಜ್ಞಾನ ಸಮಿತಿಯಿಂದ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತುಗಳ ಪ್ರಾಯೋಗಿಕ ಪ್ರದರ್ಶನ ನೀಡಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಶ್ರೀನಿವಾಸ್, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕುಮಾರ್, ಬಾಲಗಣಪತಿ ಸಮಿತಿ ಸದಸ್ಯ ವೆಂಕಟೇಶ್, ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಗಣೇಶ್ ಕುಕ್ಕೋಡು, ಕರ್ನಾಟಕ ಜಾನಪದ ಪರಿಷತ್ ಉಪಾಧ್ಯಕ್ಷ ಸರ್ವಜಿತ್, ಸುನಿಲ್ ಮಸಿಗದ್ದೆ, ಮಹಮ್ಮದ್ ಶಮೀರ್, ಆಶಾ, ಪೂರ್ಣಿಮಾ, ನಿಖಿತಾ, ಪ್ರಿಯಾ, ನಗಿನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net