ಅಂಗವಿಕಲರು ಮುಖ್ಯವಾಹಿನಿಗೆ ಬರಲಿ

ಅಂಗವಿಕಲರು ಮುಖ್ಯವಾಹಿನಿಗೆ ಬರಲಿ
Published on

ಮದ್ದೂರು: ಸರ್ಕಾರ ಹಾಗೂ ಸಂಘ, ಸಂಸ್ಥೆಗಳು ನೀಡುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ತಾಲೂಕು ಪಂಚಾಯಿತಿ ನರೇಗಾ ಸಹಾಯ ನಿರ್ದೇಶಕ ಮಂಜುನಾಥ್ ಹೇಳಿದರು.

ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮದ್ದೂರು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್, ಅಲಿಂಕೋ ಸಂಸ್ಥೆ, ಪ್ರಾದೇಶಿಕ ಕೇಂದ್ರ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ವಿವಿಧೋದ್ದೇಶ ಹಾಗೂ ಗ್ರಾಮೀಣ ಹಾಗೂ ಪುರಸಭೆ ಪುನರ್ವಸತಿ ಕಾರ್ಯಕರ್ತರು, ಶ್ರೀ ರಮಣ ಮಹರ್ಷಿ ಅಂದರ ಪರಿಷತ್ ಹಾಗೂ ಸರ್ವೋದಯ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ, ಮದ್ದೂರು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆ ವಿತರಿಸುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರಲ್ಲೂ ಅಸಾಮಾನ್ಯ ಜ್ಞಾನ ಮತ್ತು ಶಕ್ತಿ ಇದೆ. ಹಲವಾರು ಮಂದಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಇದನ್ನು ಅರಿತು ಪ್ರತಿಯೊಬ್ಬರು ಸಾಧನೆ ಮಾಡುವತ್ತ ಗಮನ ನೀಡಬೇಕೆಂದರು.

ಶಿಬಿರದಲ್ಲಿ 300 ಕ್ಕೂ ಹೆಚ್ಚಿನ ಮಂದಿಗೆ ತಪಾಸಣೆ ಮಾಡಲಾಯಿತು. 160 ಮಂದಿಗೆ ಆಯ್ಕೆ ಮಾಡಿಕೊಳ್ಳಲಾಯಿತು. ಮುಂದಿನ ದಿನಗಳಲ್ಲಿ ಇವರಿಗೆ ಕಿವಿ ಮಿಷನ್, ಕೃತಕ ಕಾಲು, ಕೈಗಳನ್ನು ಕೊಡಿಸಲಾಗುವುದು ಎಂದು ಸರ್ವೋದಯ ವಿಕಲಚೇತನರ ಸಂಘದ ಅಧ್ಯಕ್ಷ ಎಸ್.ಸಿ.ರಮೇಶ್ ತಿಳಿಸಿದರು.

ಉಪನ್ಯಾಸಕಿ ಪ್ರೊ.ಕೃಷ್ಣವೇಣಿ, ಅಲಿಂಕೋ ಸಂಸ್ಥೆಯ ಶಿಲ್ಪಾ, ಡಿಡಿಡಬ್ಲುೃ ಯೋಜನಾ ಸಂಯೋಜಕ ಅಭಿಷೇಕ್, ಸರ್ವೋದಯ ವಿಕಲಚೇತನರ ಅಧ್ಯಕ್ಷ ಎಸ್.ಸಿ.ರಮೇಶ್, ಬಿಆರ್‌ಸಿ ಸುರೇಶ್, ಎಂ.ಆರ್.ಬ್ಲೂೃಪುಟ್ಟಸ್ವಾಮಿ, ರಮಣ ಮಹರ್ಷಿ ಅಂಧರ ಕೆ.ಬಿ.ಜಯಂತಿ, ಮಹಾದೇವು, ಡಾ.ಮಾದೇಗೌಡ, ಬೋರೇಗೌಡ, ಸಿ.ಕೆ.ಕೃಷ್ಣ ಹಾಗೂ ಪುನರ್ವಸತಿ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net