ಅಡ್ಡಮತದಾನಕ್ಕೆ ಶಾಸಕ ಅಸಮಾಧಾನ

bangarapeete
Published on

 ಬಂಗಾರಪೇಟೆ: ಡಿಸಿಸಿ ಬ್ಯಾಂಕ್​ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್​ ಮುಖಂಡ ಹೊಸೂರ್​ ಕೃಷ್ಣಪ್ಪ ಅಡ್ಡ ಮತದಾನ ಮಾಡಿಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಕಾಂಗ್ರೆಸ್​ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್​ ಹಿರಿಯ ಮುಖಂಡ ಹೊಸೂರ್​ ಕೃಷ್ಣಪ್ಪ ಪಕ್ಷದ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ. ಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ರಂಗಾಚಾರಿ ಗೆದ್ದ ನಂತರ ಶಾಸಕರು ಮಾತನಾಡುವ ಸಂದರ್ಭದಲ್ಲಿ ಕಾಂಗ್ರೆಸ್​ ಜತೆಯಲ್ಲೇ ಇದ್ದು ಹೊಸೂರ್​ ಕೃಷ್ಣಪ್ಪ ಪಕ್ಷದಲ್ಲಿ ಹಿರಿಯರಾಗಿ ಬೆನ್ನಿಗೆ ಚೂರಿ ಹಾಕಿದ್ದಾರೆ, ನಂಬಿಕೆ ದ್ರೋಹ ಮಾಡಬಾರದಿತ್ತು ಎಂದರು.

ಶಾಸಕರ ಕೆಂಗಣ್ಣಿಗೆ ಗುರಿಯಾದ ಹೊಸೂರ್​ ಕೃಷ್ಣಪ್ಪ: ಕಾಂಗ್ರೆಸ್​ ಬೆಂಬಲಿತ ಕಾಮಸಮುದ್ರಂ ರಂಗಾಚಾರಿ ಮತ್ತು ಮೈತ್ರಿ ಪಕ್ಷದಿಂದ ಮಾರ್ಕಂಡೇಗೌಡ ಸ್ಪರ್ಧೆ ಮಾಡಿದ್ದರು. ಒಟ್ಟು13 ಮತಗಳ ಪೈಕಿ 9 ಮತ ಕಾಂಗ್ರೆಸ್​ ಪರವಾಗಿತ್ತು. ಮೈತ್ರಿ ಅಭ್ಯರ್ಥಿಗೆ 3 ಮತಗಳು ಮಾತ್ರ ಇತ್ತು. ಚುನಾವಣೆಯಲ್ಲಿ ರಂಗಾಚಾರಿಗೆ 8 ಮತ್ತು ಮಾರ್ಕಂಡೇಗೌಡ ಅವರಿಗೆ 4 ಮತ ಬಂದಿವೆ. ಒಂದು ಮತ ಮೈತ್ರಿ ಅಭ್ಯರ್ಥಿಗೆ ಹೋಗಿರುವುದು ಕುತೂಹಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕ ಅಂಕಂಡಹಳ್ಳಿ ಸೊಸೈಟಿಯಿಂದ ಡೆಲಿಗೇಟ್​ ಆಗಿದ್ದ ಹೊಸೂರ್​ ಕೃಷ್ಣಪ್ಪ ಅಡ್ಡ ಮತದಾನ ಮಾಡಿದ್ದಾರೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಅನುಮಾನ ಮೂಡಿಸಿತ್ತು. ಆಕಾಂಕ್ಷಿಯಾಗಿದ್ದ ಹೊಸೂರ್​ ಕೃಷ್ಣಪ್ಪ ಶತ ಪ್ರಯತ್ನ ನಡೆಸಿ ವಿಫಲರಾದರು.

ಚುನಾವಣೆವರೆಗೂ ಕಾಂಗ್ರೆಸ್​ ಜತೆಯಲ್ಲೇ ಇದ್ದು ಅಡ್ಡ ಮತದಾನ ಮಾಡಿ ಶಾಸಕರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.ಇತ್ತೀಚೆಗೆ ನಡೆದ ಪಿಎಲ್​ಡಿ ಬ್ಯಾಂಕ್​ ನಿರ್ದೇಶಕರ ಚುನಾವಣೆಗೆ ಸಾಲಗಾರರಲ್ಲದ ಕ್ಷೇತ್ರದಿಂದ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಹೊಸೂರ್​ ಕೃಷ್ಣಪ್ಪ ಅವರ ಗೆಲುವಿಗೆ ಶಾಸಕರು ಶ್ರಮಿಸಿದ್ದರು. ಆದರೆ, ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಡಿಸಿಸಿ ಬ್ಯಾಂಕ್​ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಹೊಸೂರ್​ ಕೃಷ್ಣಪ್ಪ ಯೋಜನೆ ಲ ನೀಡಲಿಲ್ಲ. ಹೀಗಾಗಿ ಮೈತ್ರಿಗೆ ಅಡ್ಡ ಮತದಾನ ಮಾಡಿದ್ದಾರೆ ಎಂಬ ಬಲವಾದ ಕೂಗು ಪಕ್ಷದ ವಲಯದಲ್ಲಿ ಕೇಳಿ ಬಂದಿತ್ತು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವಪ್ಪ, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ರಘುನಾಥ್​, ಕಾಮಸಮುದ್ರ ಗ್ರಾಪಂ ಅಧ್ಯಕ್ಷ ಆದಿನಾರಾಯಣ ಕುಟ್ಟಿ ಇದ್ದರು.

ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮೈತ್ರಿ ಅಭ್ಯರ್ಥಿಗೆ ಹಣ ನೀಡಿ ಕಾಂಗ್ರೆಸ್​ ಅಭ್ಯರ್ಥಿ ರಂಗಾಚಾರಿ ಸೋಲಿಸಲು ನಡೆಸಿದ ಪಿತೂರಿ ಲಿಸಲಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್​ ಸೋಲಿಸಲು ನಡೆಸಿದ ಪಿತೂರಿಗಳು ವಿಫಲವಾಗಿವೆ. > ಎಸ್​.ಎನ್​.ನಾರಾಯಣಸ್ವಾಮಿ ಬಂಗಾರಪೇಟೆ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net