ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು

17Rayabag2
Published on

ರಾಯಬಾಗ: ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ ಅವರ ಪುತ್ರ ಶಿವರಾಜ ಪಾಟೀಲ ವಿರುದ್ಧ ಹಾರೂಗೇರಿ ಪೊಲೀಸ್ ಠಾಣೆ ಪಿಎಸ್‌ಐ ಮಾಳಪ್ಪ ಪೂಜಾರಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆಗ್ರಹಿಸಿ ಶುಕ್ರವಾರ ಪಟ್ಟಣದಲ್ಲಿ ಅಭಾಜಿ ಅಭಿಮಾನಿ ಬಳಗದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ ಮಾತನಾಡಿ, ಹಾರೂಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಮಾಳಪ್ಪ ಶಾಸಕ ಮಹೇಂದ್ರ ತಮ್ಮಣ್ಣವರ ಮಾತು ಕೇಳಿ ಶಿವರಾಜ ಪಾಟೀಲ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಪ್ರಕರಣ ಕುರಿತು ಬೆಳಗಾವಿ ಎಸ್ಪಿ ವಿಶೇಷ ತನಿಖೆ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ವಿ.ಎಲ್.ಪಾಟೀಲ (ಅಭಾಜಿ) ಅಭಿಮಾನಿ ಬಳಗದಿಂದ ತಹಸೀಲ್ದಾರ್ ಮಹಾದೇವ ಸನಮುರಿಗೆ ಮನವಿ ಸಲ್ಲಿಸಲಾಯಿತು.

ಸದಲಗಾ ಪಟ್ಟಣದ ಧರಿಕಾನ ಅಜ್ಜ, ಕಾಡಯ್ಯ ಸ್ವಾಮಿ, ಪಪಂ ಅಧ್ಯಕ್ಷ ಅಶೋಕ ಅಂಗಡಿ, ಅಂಬೂಪ್ರಸಾದ ನರೋಟೆ, ಪ್ರಕಾಶ ಹುಕ್ಕೇರಿ, ವಕೀಲರಾದ ಪಿ.ಎಂ.ಪಾಟೀಲ, ಶಿವಪುತ್ರ ಹಾಡಕರ, ಮಹಾದೇವ ವಡಗಾಂವೆ, ರಾಮಚಂದ್ರ ಹೆಗಡೆ, ಮುರಾರಿ ಶಿಂಗಾಡೆ, ಬಸು ಪೂಜೇರಿ, ಹಾಲಪ್ಪ ನಿಲಜಗಿ, ಸಿದ್ದಪ್ಪ ಹುಕ್ಕೇರಿ, ಲಕ್ಷ್ಮಿಕಾಂತ ದೇಸಾಯಿ, ಭೀಮಪ್ಪ ಬನಶಂಕರಿ, ಹಾಲಪ್ಪ ಪೂಜೇರಿ, ಪ್ರವೀಣ ಗಡ್ಡೆ, ರವಿ ತರಾಳ, ರಸೀದ್ ತಾಂಬೊಳೆ, ಜ್ಯೋತಿ ಮಾನೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net