ನುಗ್ಗೇಹಳ್ಳಿಯಲ್ಲಿ ಲಾಡು, ಪುಳಿಯೋಗರೆ ವಿತರಣೆ

IMG_20250110_175107
Published on

ನುಗ್ಗೇಹಳ್ಳಿ: ಗ್ರಾಮದ ಪೇಟೆ ಬೀದಿಯ ಪುರಾಣ ಪ್ರಸಿದ್ಧ ಶ್ರೀ ತಿರುಮಲ ವೆಂಕಟೇಶ್ವರ ಭೂವರಾಹ ಸ್ವಾಮಿ ಹಾಗೂ ಮಹಾಲಕ್ಷ್ಮೀ ದೇಗುಲದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಬೆಳಗ್ಗೆ ದೇವರಿಗೆ ಅಭಿಷೇಕ, ಹೂವಿನ ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಶಾಸಕ ಸಿ.ಎನ್.ಬಾಲಕೃಷ್ಣ ಸೇರಿದಂತೆ ಸಹಸ್ರರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯ ಆಡಳಿತ ಮಂಡಳಿ ವತಿಯಿಂದ ಭಕ್ತರಿಗೆ ಲಾಡು ಹಾಗೂ ಪುಳಿಯೋಗರೆ ಪ್ರಸಾದ ವಿತರಣೆ ಮಾಡಲಾಯಿತು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಭಕ್ತರಿಗೆ ತಿರುಪತಿ ಮಾದರಿಯಲ್ಲಿ ಲಾಡು ವಿತರಣೆ ಮಾಡಲಾಗುತ್ತಿದೆ. ದೇವಾಲಯದ ಜೀರ್ಣೋದ್ಧಾರಕ್ಕೆ ಹೆಚ್ಚಿನ ಅನುದಾನ ಒದಗಿಸಿದ್ದು ಮುಂಬರುವ ದಿನಗಳಲ್ಲೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ದೇವಾಲಯದ ಮುಖ್ಯ ಅರ್ಚಕರಾದ ವಿ.ಎನ್.ಆಚಾರ್ಯ, ಪ್ರಸನ್ನ ಕೇಶವ ಆಚಾರ್, ರಾಜು, ಭಗವಾನ್, ಮೆಡಿಕಲ್ ವೆಂಕಟೇಶ್, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ನಟರಾಜ್ ಯಾದವ್, ಎನ್. ಎಸ್. ಮಂಜುನಾಥ್, ಹೊನ್ನೇಗೌಡ, ಮುಖಂಡರಾದ ಎನ್. ಡಿ. ಶಂಕರ್, ವೀರಶೈವ ಮುಖಂಡ ಕೃಪಾ ಶಂಕರ್, ಬೆಳಗಿಹಳ್ಳಿ ಪುಟ್ಟಸ್ವಾಮಿ, ನೇತ್ರಾವತಿ ದೊರೆಸ್ವಾಮಿ, ಉದ್ಯಮಿ ಸಬ್ಸಿಡಿ ಪುನೀತ್, ಜಂಬೂರ್ ಮಹೇಶ್, ಅಕ್ಕನಹಳ್ಳಿ ದಯಾನಂದ್, ಎನ್.ಆರ್.ಚಂದ್ರು, ಬಸವನಪುರ ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net