ಕೆಳಮಟ್ಟದ ಕಾಲುವೆಗೆ ಬೊಂಗಾ: ಭತ್ತದ ಗದ್ದೆಗಳಿಗೆ ಹರಿದ ಅಪಾರ ನೀರು

07012021 Kurugodu tungabhadra Canal Leakge Bonga
Published on

ಕುರುಗೋಡು: ತಾಲೂಕಿನ ಸಿಂದಿಗೇರಿ ಗ್ರಾಮದ ಹತ್ತಿರ ಹಾದು ಹೋಗುವ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆ 84 ಮೈಲಿಕಲ್ಲು ಬಳಿ ಗುರುವಾರ ಬೆಳಗಿನ ಜಾವ ಬೊಂಗಾ ಬಿದ್ದಿದೆ. ಪರಿಣಾಮ ಕಾಲುವೆ ಪಕ್ಕದ ಗದ್ದೆಗಳಿಗೆ ಅಪಾರ ನೀರು ನುಗ್ಗಿದೆ.

ರಾತ್ರಿ ಸಮಯ ಕೆಲಸ ನಿರ್ವಹಿಸುತ್ತಿದ್ದ ನೀರಾವರಿ ಇಲಾಖೆ ಅಧಿಕಾರಿಗಳು ಇದನ್ನು ಗಮನಿಸಿ, ತಮ್ಮ ತಂಡದೊಂದಿಗೆ ಗ್ರಾಮಸ್ಥರು ಹಾಗೂ ರೈತರ ಸಹಾಯ ಪಡೆದು ಬೊಂಗಾ ಬಿದ್ದ ಸ್ಥಳದಲ್ಲಿ ಗ್ರಾವೆಲ್ ಹಾಕಿ ಸರಿಪಡಿಸಿದರು. ಈ ಮೊದಲೇ ಭತ್ತದ ಬೆಳೆ ಕಟಾವು ಮಾಡಿದ್ದರಿಂದ ಬೆಳೆಹಾನಿ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net