ಕೂಡ್ಲಿಗಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಲಾರಿ ಹರಿದು 25ಕ್ಕೂ ಹೆಚ್ಚು ಕುರಿ ಸಾವು

Shivapura Accident Sheep Death
ಕೂಡ್ಲಿಗಿ ತಾಲೂಕಿನ ಶಿವಪುರ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಲಾರಿ ಹರಿದು 25ಕ್ಕೂ ಹೆಚ್ಚು ಕುರಿಗಳು ಸತ್ತಿರುವುದು.
Published on

ಕೂಡ್ಲಿಗಿ: ತಾಲೂಕಿನ ಶಿವಪುರ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮಂಗಳವಾರ ಲಾರಿ ಹರಿದು 25ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಸತ್ತಿವೆ. ಶಿವಪುರ ಗೊಲ್ಲರಹಟ್ಟಿಯ ಸಣ್ಣ ಚಿತ್ತಪ ಅವರ ಕುರಿಗಳು ಸತ್ತಿವೆ. ಎಂದಿನಂತೆ ಗೊಲ್ಲರಹಟ್ಟಿಯಿಂದ ಹೊಸಪೇಟೆ ರಸ್ತೆ ಅಕ್ಕ ಪಕ್ಕದಲ್ಲಿರುವ ಅರಣ್ಯದ ಕಡೆ ಮೇಯಿಸಲು ಹೊಡೆದುಕೊಂಡು ಹೆದ್ದಾರಿ ದಾಟುವಾಗ ಲಾರಿ ಹರಿದಿದೆ. ಸ್ಥಳದಲ್ಲಿಯೇ 25ಕ್ಕೂ ಹೆಚ್ಚು ಕುರಿಗಳು ಸತ್ತರೆ, 25 ಕುರಿಗಳು ಗಾಯಗೊಂಡಿವೆ. ಅವುಗಳೊಂದಿಗೆ ಇದ್ದ ಚಿತ್ತಪ್ಪನ ಮಗ ಮಹಾಲಿಂಗಪ್ಪನಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಕುರಿಗಾಹಿ ರುದ್ರಪ್ಪ ನೀಡಿದ ದೂರಿನ ಮೇರೆಗೆ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net