ಅಂತರಂಗ ಶುದ್ಧಿಗೆ ಭಾಗವತ ಶ್ರವಣ | Kaivara tataiah

ಕೈವಾರ ತಾತಯ್ಯನವರ 300ನೇ ಜಯಂತ್ಯುತ್ಸವ ಪ್ರಯುಕ್ತ ಕೈವಾರ ಶ್ರೀ ಯೋಗಿ ನಾರೇಯಣ ಮಠದಿಂದ ಬಜಾರ್ ಬೀದಿಯಲ್ಲಿರುವ ಶ್ರೀವಾಸವಿ ಭವನದಲ್ಲಿ ಹಮ್ಮಿಕೊಂಡಿರುವ ಪೋತನ ಭಾಗವತ ಹಾಗೂ ಅಮರನಾರೇಯಣ ಶತಕ ಪ್ರವಚನ ಸಪ್ತಾಹದಲ್ಲಿ ಕೈವಾರ ಕ್ಷೇತ್ರದ ಧರ್ವಾಧಿಕಾರಿ ಡಾ. ಎಂ.ಆರ್. ಜಯರಾಮ್ ಅಭಿಮತ
kaivara tatayya
ಮುಳಬಾಗಿಲಿನ ಶ್ರೀವಾಸವಿ ಭವನದಲ್ಲಿ ಆಯೋಜಿಸಿದ್ದ ಪೋತನ ಭಾಗವತ ಪ್ರವಚನ ಸಪ್ತಾಹಕ್ಕೆ ಕೈವಾರ ಕ್ಷೇತ್ರದ ಧರ್ವಾಧಿಕಾರಿ ಡಾ. ಎಂ.ಆರ್. ಜಯರಾಮ್ ಚಾಲನೆ ನೀಡಿದರು. ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್.ಕೃಷ್ಣಯ್ಯ, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಡಾ.ಆರ್. ಆರ್.ಪ್ರಕಾಶ್, ಕಾರ್ಯದರ್ಶಿ ಸುಬ್ಬಯ್ಯಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ಕೊಂಡಪ್ಪ ಇದ್ದರು.kaivara tatayya
Published on: 

ಮುಳಬಾಗಿಲು: ವಾನವನ ಮೋಕ್ಷ ಸಂಪಾದನೆಗೆ ಅಹಂಕಾರವೇ ಅಡ್ಡಿಯಾಗಿದ್ದು, ಅದನ್ನು ತೊರೆದು ಅಂತರಂಗ ಶುದ್ಧಿಗಾಗಿ ಭಾಗವತ ಶ್ರವಣ ವಾಡಬೇಕು ಎಂದು ಕೈವಾರ ಕ್ಷೇತ್ರದ ಧರ್ವಾಧಿಕಾರಿ ಡಾ.ಎಂ.ಆರ್. ಜಯರಾಮ್ ತಿಳಿಸಿದರು.

ಕೈವಾರ ತಾತಯ್ಯನವರ 300ನೇ ಜಯಂತ್ಯುತ್ಸವ ಪ್ರಯುಕ್ತ ಕೈವಾರ ಶ್ರೀ ಯೋಗಿ ನಾರೇಯಣ ಮಠದಿಂದ ಬಜಾರ್ ಬೀದಿಯಲ್ಲಿರುವ ಶ್ರೀವಾಸವಿ ಭವನದಲ್ಲಿ ಹಮ್ಮಿಕೊಂಡಿರುವ ಪೋತನ ಭಾಗವತ ಹಾಗೂ ಅಮರನಾರೇಯಣ ಶತಕ ಪ್ರವಚನ ಸಪ್ತಾಹ ಉದ್ಘಾಟಿಸಿ ವಾತನಾಡಿದರು.

ಪ್ರಸ್ತುತ ಜಗತ್ತಿನಲ್ಲಿ ವ್ಯಾಮೋಹ ಹೆಚ್ಚಾಗುತ್ತಿದ್ದು, ಜೀವನದಲ್ಲಿ ಶಾಂತಿ, ಸವಾಧಾನ ದೂರವಾಗುತ್ತಿದೆ. ಪರಸ್ಪರ ಸೌಹಾರ್ದ, ವಿಶ್ವಾಸ ಮತ್ತು ನಂಬಿಕೆ ಕ್ಷೀಣಿಸಿ, ದ್ವೇಷ, ಅಸೂಯೆ ಹಾಗೂ ಸ್ವಾರ್ಥ ಮನೋಭಾವ ಹೆಚ್ಚುತ್ತಿದೆ. ಎಲ್ಲವನ್ನೂ ಹೊಂದಿದ್ದರೂ ತೃಪ್ತಿ ಎಂಬುದು ಮರೀಚಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಧ್ಯಾತ್ಮದತ್ತ ಮುಖ ವಾಡುವುದೇ ನೆಮ್ಮದಿಯ ವಾರ್ಗವಾಗಿದೆ ಎಂದು ತಿಳಿಸಿದರು.

ಸಾವಾನ್ಯರಿಗೆ ಅತ್ಯಂತ ಸುಲಭವಾಗಿ ಅನುಸರಿಸಬಹುದಾದ ವಾರ್ಗ ಭಕ್ತಿ ಮಾರ್ಗದ ಮಹತ್ವವನ್ನು ಎಲ್ಲ ಸಂತರು ಸಾರಿದ್ದಾರೆ. ಭಾಗವತದ ಕಥಾನಕಗಳಲ್ಲಿ ಭಕ್ತಿ, ಧರ್ಮ ಹಾಗೂ ಮುಕ್ತಿಯ ಸಂದೇಶ ಅಡಗಿದೆ. ನಮ್ಮೊಳಗಿನ ದುರ್ಗುಣಗಳನ್ನು ದೂರವಾಡಲು ಭಾಗವತದ ಸಂದೇಶಗಳು ಸಹಕಾರಿ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಗುರುಗಳು ತೋರಿಸಿದ ಸಾಧನಾ ವಾರ್ಗವನ್ನು ಶ್ರದ್ಧೆಯಿಂದ ಅನುಸರಿಸಿದರೆ ಪರವಾತ್ಮನ ಸಾಕ್ಷಾತ್ಕಾರದತ್ತ ಸಾಗಬಹುದು ಎಂದರು.

ಕೈವಾರ ಕ್ಷೇತ್ರದ ನಾದಸುಧಾರಸ ಸಂಕೀರ್ತನಾ ಯೋಜನೆ ಸಂಚಾಲಕ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಪ್ರಾಸ್ತಾವಿಕವಾಗಿ ವಾತನಾಡಿದರು. ಖ್ಯಾತ ಭಾಗವತ ಪ್ರವಚನಕಾರ ಮಂಕಾಲ ಶ್ರೀಹರಿಶರ್ಮ ಪೋತನ ಭಾಗವತದ ವಿವಿಧ ಟ್ಟಗಳನ್ನು ವಿವರಿಸಿ ಪ್ರವಚನ ನೀಡಿದರು.

ಮಠದ ಕಾರ್ಯದರ್ಶಿ ಬ್ಯಾಂಕ್ ನಾರಾಯಣಸ್ವಾಮಿ ಸ್ವಾಗತಿಸಿದರು. ನಾಗರಾಜಾಚಾರಿ, ವೆಂಕಟಸ್ವಾಮಿ ಹಾಗೂ ಅಶ್ವತ್ಥನಾರಾಯಣ ಅವರಿಂದ ಭಕ್ತಿಗೀತೆಗಳ ಗಾಯನ ನಡೆಯಿತು.ಭಾಗವತ ಪ್ರವಚನ ಸಪ್ತಾಹವು ನಿತ್ಯ ಸಂಜೆ 6.30ರಿಂದ ರಾತ್ರಿ 8.30ರವರೆಗೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಮುಳಬಾಗಿಲಿನ ಸದ್ಗುರು ಕೈವಾರ ತಾತಯ್ಯನವರ ದೇವಾಲಯ ಹಾಗೂ ಶ್ರೀಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ವೇದಿಕೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಂಪನ ವೇದಿಕೆಯ ಡಾ.ಡಿ.ಎಂ.ದೊಡ್ಡಭದ್ರೇಗೌಡ, ಕೈವಾರ ಮಠದ ಉಪಾಧ್ಯಕ್ಷ ಜೆ. ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ. ಸತ್ಯನಾರಾಯಣ, ಸದಸ್ಯರಾದ ಕೆ.ವಿ.ಸುರೇಶ್, ಕೆ.ಎಂ.ತ್ಯಾಗರಾಜ್, ಕುರುಡುಮಲೆ ಮಂಜುನಾಥ್, ಪ್ರಭಾಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net