ಕದರೀಪುರದ ದೇಗುಲ ತೋಪು ಒತ್ತುವರಿ|temple grove

ಕೋಲಾರ ತಾಲೂಕು ಕದರೀಪುರ ಗ್ರಾಮದ ನರಸಿಂಹಸ್ವಾಮಿ ದೇಗುಲಕ್ಕೆ ಸೇರಿದ 31 ಗುಂಟೆ ವಿಸ್ತೀರ್ಣದ ಜಾಗವು ಸುತ್ತಲೂ ಒತ್ತುವರಿಯಾಗಿದ್ದು, ಖಾಸಗಿಯವರು ಬೇಲಿ ಹಾಕಿಕೊಂಡು ಆರಾಮವಾಗಿ ಬಳಕೆ ಮಾಡುತ್ತಿದ್ದರೂ ಪ್ರಶ್ನಿಸುವವರೇ ಇಲ್ಲದಂತಾಗಿದೆ.
Encroachment of the temple grove in Kadaripura
ಕೋಲಾರ ತಾಲೂಕು ಕದರೀಪುರದ ಸರ್ವೇ ನಂ.ನಂ.2ರಲ್ಲಿರುವ 31 ಗುಂಟೆ ವಿಸ್ತೀರ್ಣದ ದೇವಸ್ಥಾನ ತೋಪು ಪಕ್ಕದದಲ್ಲಿನ ಜಾಗಕ್ಕೆ ತಂತಿಬೇಲಿ ನಿರ್ಮಿಸಿಕೊಂಡಿರುವುದು. Encroachment of the temple grove in Kadaripura
Published on: 
  • ಶಾಲೆ, ರಸ್ತೆ, ಶವತಾಣ, ಖಾಸಗಿಯವರ ಪಾಲಾದ ಜಾಗ

ಕದರೀಪುರ :ಕೋಲಾರ ತಾಲೂಕು ಕದರೀಪುರ ಗ್ರಾಮದ ನರಸಿಂಹಸ್ವಾಮಿ ದೇಗುಲಕ್ಕೆ ಸೇರಿದ 31 ಗುಂಟೆ ವಿಸ್ತೀರ್ಣದ ಜಾಗವು ಸುತ್ತಲೂ ಒತ್ತುವರಿಯಾಗಿದ್ದು, ಖಾಸಗಿಯವರು ಬೇಲಿ ಹಾಕಿಕೊಂಡು ಆರಾಮವಾಗಿ ಬಳಕೆ ಮಾಡುತ್ತಿದ್ದರೂ ಪ್ರಶ್ನಿಸುವವರೇ ಇಲ್ಲದಂತಾಗಿದೆ.

ಗ್ರಾಮದ ಸರ್ವೇ ನಂ.2ರಲ್ಲಿರುವ 31 ಗುಂಟೆ ವಿಸ್ತೀರ್ಣದ ದೇವಸ್ಥಾನ ತೋಪು ಪಕ್ಕದದಲ್ಲಿ ದೇವರಹಳ್ಳಿಯ ಎನ್​ ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ಸರ್ವೇ ನಂ.61 /1 ರ ಪೈಕಿ 1.33 ಎಕರೆ ವಿಸ್ತೀರ್ಣ ಜಮೀನು ಹೊಂದಿದ್ದು, ಪಕ್ಕದಲ್ಲೇ ಇರುವ ದೇವಸ್ಥಾನದ ತೋಪು ಜಾಗವನ್ನೂ ಅತಿಕ್ರಮಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ದೇಗುಲ ಜಾಗದಲ್ಲಿ ಕದರೀಪುರ&ಇರಗಸಂದ್ರ ಮುಖ್ಯ ರಸ್ತೆ ಹಾದು ಹೋಗಿದ್ದು, ಎಡಕ್ಕೆ ರಾಜ ಕಾಲುವೆ ಹಾಗೂ ಸರ್ಕಾರಿ ಶಾಲಾ ಆಟದ ಮೈದಾನವನ್ನೂ ನಿರ್ಮಿಸಲಾಗಿದೆ.

10ರಿಂದ -15 ವರ್ಷಗಳ ಹಿಂದೆ ಒತ್ತುವರಿಯಾದ ಜಾಗ ವಿಶಾಲವಾದ ಬಂಡೆಯಿಂದ ಕೂಡಿದ್ದು, ಬಂಡೆ ಮೇಲೆ ರಾಗಿ ಬಣವೆಗಳನ್ನು ಹಾಕಿಕೊಂಡು ಅದರ ಪಕ್ಕದ ಖಾಲಿ ಜಾಗದಲ್ಲಿ ರಾಗಿ ಒಕ್ಕಣೆ ಕಣ ಮಾಡಲು ವಿಶಾಲವಾದ ಪ್ರದೇಶವಾಗಿ ಮಾಡಿಕೊಂಡು ಒಕ್ಕಣೆ ಮಾಡಿಕೊಳ್ಳುತ್ತಿದ್ದರು. ಗ್ರಾಮದ ರೈತರನ್ನು ಬೆದರಿಸಿ ಒಕ್ಕಣೆ ಕಣಗಳಿಗೆ ಅಡ್ಡಿಪಡಿಸಿ ಒತ್ತುವರಿ ಮಾಡಿಕೊಂಡು ಬೇಲಿ ಹಾಕಿಕೊಂಡು ಕ್ರೌರ್ಯ ಮೆರೆಯುತ್ತಿದ್ದಾರೆ ಎಂದು ನೊಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ದೇವಸ್ಥಾನದ ತೋಪು ಪಕ್ಕದಲ್ಲೇ ದೇವರಹಳ್ಳಿಯ ಸರ್ವೇ ನಂ.9 ರ 22 ಗುಂಟೆ ವಿಸ್ತೀರ್ಣದಲ್ಲಿ ಸಾರ್ವಜನಿಕ ಸ್ಮಶಾನ ಇದ್ದು, ಇದಕ್ಕೆ ಸಂಬಂಧಿಸಿದಂತೆ ನರೇಗಾ ಯೋಜನೆಯಲ್ಲಿ ಶವತಾಣ ನಿರ್ಮಿಸಿಲಾಗಿದೆ. ಇದರಲ್ಲೂ ಸ್ವಲ್ವ ಜಾಗವನ್ನು ದೇಗುಲ ತೋಪು ಜಾಗ ಬಳಕೆ ಮಾಡಲಾಗಿದೆ. ಈ ಶವತಾಣ ಕಾಮಗಾರಿಯಲ್ಲೂ ಕಳಪೆ ಮಾಡಲಾಗಿದ್ದು, ಸಾರ್ವಜನಿಕರು ಬಳಕೆ ಮಾಡದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸರ್ವೇ ಮಾಡಿ ಒತ್ತುವರಿಯಾಗಿರುವ ಜಮೀನನ್ನು ತೆರವು ಮಾಡಿ ಗಡಿ ನಿರ್ಮಿಸಲು ತಹಸೀಲ್ದಾರ್​ ಅವರನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸಿ ದೇವಸ್ಥಾನದ ತೋಪು ಜಮೀನು ಭದ್ರಪಡಿಸಿ ಕದರೀಪುರ ದೇವಸ್ಥಾನ ಇಲ್ಲವೇ ಸರ್ಕಾರಿ ಶಾಲೆಗೆ ಉಪಯೋಗಕ್ಕೆ ಸೀಮಿತಗೊಳಿಸಿ ತಂತಿ ಬೇಲಿ ನಿರ್ಮಿಸಬೇಕಿದೆ.
ವಿ.ಮಂಜುನಾಥ್​ ಎಸ್​ಡಿಎಂಸಿ ಅಧ್ಯಕ್ಷ ಕದರೀಪುರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net