15 ಮಂದಿ ವಿರುದ್ಧ ಪ್ರಕರಣ|Crime

ಮುಳಬಾಗಿಲು ಒಕ್ಕಲಿಗರ ಸಂಘದಿಂದ ಅ.6ರಂದು ನಗರದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಪಲ್ಲಕ್ಕಿ ಮೆರವಣಿಗೆಯಲ್ಲಿ ಅನುಮತಿ ಪಡೆಯದೆ ಡಿಜೆ ಬಳಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡ್ಡಿ ಆರೋಪದಡಿ ಒಟ್ಟು 15 ಮಂದಿ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
DJ issues
AI PHOTODJ issues
Published on: 
  1. ಕೆಂಪೇಗೌಡ ಜಯಂತಿ ಪಲ್ಲಕ್ಕಿ ಮೆರವಣಿಗೆಯಲ್ಲಿ ಡಿಜೆ ಬಳಕೆ

  2. ಹೆದ್ದಾರಿ ಸಂಚಾರಕ್ಕೆ ಅಡ್ಡಿ ಆರೋಪ, ಮಹಿಳಾ ಪಿಎಸ್​ಐ ದೂರು

ಮುಳಬಾಗಿಲು: ತಾಲೂಕು ಒಕ್ಕಲಿಗರ ಸಂಘದಿಂದ ಅ.6ರಂದು ನಗರದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಪಲ್ಲಕ್ಕಿ ಮೆರವಣಿಗೆಯಲ್ಲಿ ಅನುಮತಿ ಪಡೆಯದೆ ಡಿಜೆ ಬಳಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡ್ಡಿ ಆರೋಪದಡಿ ಒಟ್ಟು 15 ಮಂದಿ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪಿಎಎಸ್​ಐ ನಾಗರತ್ನಮ್ಮ ನೀಡಿದ ದೂರಿನ ಮೇರೆಗೆ ಅ.7 ರಂದು ರಾಮಪುರದ ದರ್ಶನ್​ (22), ಚಲಂರಾಜು (35), ಕೆ.ಎನ್​. ರವೀಂದ್ರ (43), ಪ್ರವಿಣ್​ ಕುಮಾರ್​ (37), ಮುನಿರಾಜು (24), ಮುರಳಿ (22), ಮಂಜುನಾಥ್​ (46), ಶಿವಕುಮಾರ್​ (35), ಊರುಕುಂಟೆ ಮಿಟ್ಟೂರು ಗ್ರಾಮದ ಅಶೋಕ್​ (45), ಅನಿಲ್​ (35), ಹರೀಶ್​ (40), ಮಹೇಂದ್ರ (32), ಗಿರೀಶ್​ (38), ಅರುಣ್​ (32), ಪವನ್​ (28) ಸೇರಿ ಇತರ ಅಪರಿಚಿತರ ಹೆಸರು ಎಂದೂ ದೂರಿನಲ್ಲಿ ಉಲ್ಲೇಖಿತವಾಗಿದೆ.

ಏನಿದು ಘಟನೆ?: ಅ.6ರಂದು ಕೆಂಪೇಗೌಡ ಜಯಂತಿ ಅಂಗವಾಗಿ ಮುಳಬಾಗಿಲು ಸಮೀಪದ ಆವಣಿ, ರಾಮಪುರ ಹಾಗೂ ಊರುಕುಂಟೆ ಮಿಟ್ಟೂರು ಗ್ರಾಮದಿಂದ ಕೆಲವರು ಮುಳಬಾಗಿಲಿಗೆ ಪಲ್ಲಕ್ಕಿ ಮೆರವಣಿಗೆ ಬರುವಾಗ ಡಿಜೆ ಬಳಸಿದ್ದರು. ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ&75ರ ಕೋಲಾರ ಬೈಪಾಸ್​ನಲ್ಲಿ ಬರುತ್ತಿದ್ದಾಗ ಗುಂಪುಕಟ್ಟಿ ನಿಲ್ಲುತ್ತಿದ್ದರಿಂದ ಸ್ಥಳದಲ್ಲಿದ್ದ ಪೊಲೀಸರು ಅನುಮತಿ ಇಲ್ಲದೆ ಡಿಜೆ ಬಳಕೆ ಸರಿಯಲ್ಲ ಎಂದು ವಾಪಸ್​ ತೆರಳುವಂತೆ ಸೂಚಿಸಿದ್ದರು. ಇದಾದ ಬಳಿಕವೂ ಗುಂಪು ಹೆದ್ದಾರಿಯಲ್ಲಿ ನಿಂತುಕೊಂಡಿದ್ದರಿಂದ ಬೆಂಗಳೂರು&ಚೆನ್ನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ದೂರಿನಲ್ಲಿ ಉಲ್ಲೆಖಿಸಲಾಗಿದೆ.

ಮಧ್ಯಾಹ್ನ ಸುಮಾರು 1.30ರಿಂದ 3.30ರವರೆಗೆ ಹೆದ್ದಾರಿಯಲ್ಲಿ ಪ್ರತಿಭಟನೆ ಅಥವಾ ರಸ್ತೆ ತಡೆ ರೀತಿಯ ಪರಿಸ್ಥಿತಿ ಉಂಟಾಗಿದ್ದು, ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಾಗಿದೆ. ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ ಕೆಲವರು ವಾಗ್ವಾದ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪವೂ ದೂರಿನಲ್ಲಿ ಉಲ್ಲೆಖವಾಗಿದೆ. ಬಂದೋಬಸ್ತ್​ ಕರ್ತವ್ಯದಲ್ಲಿ ಪೊಲೀಸರು ರಾತ್ರಿ ವರೆಗೂ ನಿರತರಾಗಿದ್ದರಿಂದ ಘಟನೆಗೆ ಸಂಬಂಧಿಸಿದವರ ಹೆಸರು ಮತ್ತು ವಿಳಾಸ ಪಡೆದು ಅ.7ರಂದು ದೂರು ನೀಡಲಾಗಿದೆ ಎಂದು ವಿವರಿಸಲಾಗಿದೆ.

ಅಧಿಕಾರಿಗಳಿಂದ ಮನವೊಲಿಕೆ

ಪರಿಸ್ಥಿತಿ ತಿಳಿಗೊಳಿಸಲು ನಗರ ಠಾಣೆ ಇನ್​ಸ್ಪೆಕ್ಟರ್​ ಎ.ಸುಧಾಕರ್​ ರೆಡ್ಡಿ, ಗ್ರಾಮಾಂತರ ಸಿಪಿಐ ಕೆ.ಜಿ. ಸತೀಶ್​, ಶ್ರೀನಿವಾಸಪುರ ಠಾಣೆ ಪಿಐಗಳಾದ ಶಂಕರಾಚಾರಿ, ಶಿವಕುಮಾರ್​, ಡಿಸಿಆರ್​ಬಿ ಪಿಎಸ್​ಐ ಎಸ್​.ಟಿ. ನಾರಾಯಣಸ್ವಾಮಿ, ಎಎಸ್​ಐ ಜಗನ್ನಾಥ್​ ಸೇರಿ ಇತರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಗುಂಪಿನೊಂದಿಗೆ ಮಾತುಕತೆ ನಡೆಸಿ ಹೆದ್ದಾರಿಯಿಂದ ತೆರಳಲು ಮನವೊಲಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net