ಬದಲಾಗುತ್ತಿರುವ ಕಾನೂನಿನ ಅರಿವು ಔಷಧ ವ್ಯಾಪಾರಿಗಳಿಗೆ ಇರಬೇಕು

ಆಯಾ ಜಿಲ್ಲೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಔಷಧಿ ವ್ಯಾಪಾರಸ್ಥರನ್ನು ರಾಜ್ಯಸರ್ಕಾರ ಔಷಧಿ ವ್ಯಾಪಾರಸ್ಥರ ದಿನದಂದು ಸನ್ಮಾನಿಸುತ್ತಿದ್ದು, ಈ ವರ್ಷ ವೀರಾಜಪೇಟೆಯ ಎಂ. ಸುದರ್ಶನ್ ರೈ ಮತ್ತು ಪತ್ನಿ ವಿಜಯಲಕ್ಷ್ಮಿ ರೈ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಡಾ. ಅನಿಲ್ ಧಾವನ್, ಅಂಬೆಕಲ್ಲು ಜೀವನ್ ಕುಶಾಲಪ್ಪ, ಅಜಯ್ ರಾಜ್ ಷಾ, ಡಾ. ಕರುಂಬಯ್ಯ ಮತ್ತಿತರರು ಇದ್ದರು.
ಆಯಾ ಜಿಲ್ಲೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಔಷಧಿ ವ್ಯಾಪಾರಸ್ಥರನ್ನು ರಾಜ್ಯಸರ್ಕಾರ ಔಷಧಿ ವ್ಯಾಪಾರಸ್ಥರ ದಿನದಂದು ಸನ್ಮಾನಿಸುತ್ತಿದ್ದು, ಈ ವರ್ಷ ವೀರಾಜಪೇಟೆಯ ಎಂ. ಸುದರ್ಶನ್ ರೈ ಮತ್ತು ಪತ್ನಿ ವಿಜಯಲಕ್ಷ್ಮಿ ರೈ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಡಾ. ಅನಿಲ್ ಧಾವನ್, ಅಂಬೆಕಲ್ಲು ಜೀವನ್ ಕುಶಾಲಪ್ಪ, ಅಜಯ್ ರಾಜ್ ಷಾ, ಡಾ. ಕರುಂಬಯ್ಯ ಮತ್ತಿತರರು ಇದ್ದರು.ಬದಲಾಗುತ್ತಿರುವ ಕಾನೂನಿನ ಅರಿವು ಔಷಧ ವ್ಯಾಪಾರಿಗಳಿಗೆ ಇರಬೇಕು
Published on: 

ಮಡಿಕೇರಿ

ಬದಲಾಗುತ್ತಿರುವ ಕಾನೂನು ಕಾಯಿದೆಗಳನ್ನು ಗಮನದಲ್ಲಿರಿಸಿಕೊಂಡು ಪ್ರತೀಯೋರ್ವ ಔಷಧಿ ವ್ಯಾಪಾರಿಯೂ ಪಾರದರ್ಶಕವಾಗಿ ವ್ಯವಹರಿಸಿ ಗ್ರಾಹಕರಿಗೆ ಸೇವಾ ಮನೋಭಾವದಿಂದ ಔಷಧಿಗಳನ್ನು ನೀಡಬೇಕೆಂದು ಕೊಡಗು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಯ ಅಂಕಿತ ಅಧಿಕಾರಿ ಡಾ. ಅನಿಲ್ ಧಾವನ್ ಹೇಳಿದರು. ನಗರದ ಫಾರ್ಮಾ ಭವನದಲ್ಲಿ ಕೊಡಗು ಔಷಧಿ ವ್ಯಾಪಾರಸ್ಥರ ಸಂಘದಿAದ ಶನಿವಾರ ಆಯೋಜಿತವಾಗಿದ್ದ ವಿಶ್ವ ಔಷಧಿ ತಜ್ಞರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪ್ರತೀಯೋರ್ವ ವ್ಯಾಪಾರಸ್ಥರು ಆಹಾರ ಪರವಾನಗಿ ಪಡೆಯಲೇಬೇಕು. ಉತ್ತಮ ಗುಣಮಟ್ಟದ ಆಹಾರ ಮತ್ತು ಔಷಧಿಯನ್ನು ಗ್ರಾಹಕರಿಗೆ ನೀಡುವುದು ವ್ಯಾಪಾರಸ್ಥರ ಆದ್ಯತೆಯಾಗಿದ್ದು ಈ ಸಂಬಧ ಯಾವುದೇ ದೂರು ಬಂದಲ್ಲಿ ಅಂಥ ವ್ಯಾಪಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಖಂಡಿತ ಎಂದರು.

ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ಲು ಜೀವನ್ ಕುಶಾಲಪ್ಪ ಮಾತನಾಡಿ, ಸಮಾಜಕ್ಕೆ ಔಷಧಿ ವ್ಯಾಪಾರಸ್ಥರ ಸೇವೆಯನ್ನು ಗುರುತಿಸಿ ಗೌರವಿಸುವ ದಿನವನ್ನು ಎಲ್ಲಾ ಔಷಧಿ ವ್ಯಾಪಾರಸ್ಥರು ಸಂಭ್ರಮದಿAದ ಆಚರಿಸಿಕೊಳ್ಳುವಂತಾಗಿದೆ. ಕೊಡಗು ಜಿಲ್ಲೆಯಲ್ಲಿ ಸಂಘಕ್ಕೆ ಸ್ವಂತ ಭವನ ನಿರ್ಮಾಣವಾಗಿದ್ದು, ಇಲ್ಲಿ ಮುಂದಿನ ದಿನಗಳಲ್ಲಿ ವಿನೂತನ ಕಾರ್ಯಕ್ರಮಗಳು, ಸಭೆಗಳನ್ನು ಆಯೋಜಿಸುತ್ತಾ ಸಮಾಜಮುಖಿಯಾಗಿ ಸಂಘವನ್ನು ಕೊಂಡೊಯ್ಯಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಸಹಾಯಕ ಔಷಧಿ ನಿಯಂತ್ರಕ ಅಜಯ್ ರಾಜ್ ಷಾ ಮಾತನಾಡಿ, ಔಷಧಿ ಮಾರಾಟದ ಹಲವಾರು ಕಾನೂನುಗಳು ಕೂಡ ಬದಲಾಗುತ್ತಲೇ ಇವೆ. ಇಂಥ ಕಾನೂನು ನಿಯನಗಳ ಬಗ್ಗೆ ಕಾಲಕಾಲಕ್ಕೆ ತಿಳಿಯುವುದು ಔಷಧಿ ವ್ಯಾಪಾರಸ್ಥರ ಕರ್ತವ್ಯವಾಗಿದೆ. ಕಾನೂನು ಪಾಲನೆ ಮಾಡುವ ಮೂಲಕ ಸರ್ಕಾರದ ಕಾನೂನುಗಳನ್ನು ಗೌರವಿಸಬೇಕು. ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಉತ್ತಮ ಔಷಧಿ ತಜ್ಞರನ್ನು ಗುರುತಿಸಿ ಗೌರವಿಸುವ ಯೋಜನೆ ಜಾರಿಯಾಗುತ್ತಿದೆ ಎಂದರು.

ಕೊಡಗು ರಕ್ತನಿಧಿ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಕರುಂಬಯ್ಯ ಮಾತನಾಡಿ, ಪ್ರತೀ ಹನಿ ರಕ್ತವೂ ಮಹತ್ವದ್ದಾಗಿದೆ. ರಕ್ತದಾನಿಗಳಿಂದ ಸಂಗ್ರಹವಾಗುವ ರಕ್ತವು ತುರ್ತು ಸಂದರ್ಭಗಳಲ್ಲಿ ಅನೇಕ ಜೀವಗಳನ್ನು ಕಾಪಾಡಲು ಬಳಕೆಯಾಗುತ್ತದೆ. ಹೀಗಾಗಿ ರಕ್ತದಾನದ ಮೂಲಕ ಅಮೂಲ್ಯ ಜೀವಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ಪ್ರತೀಯೋರ್ವರು ರಕ್ತವನ್ನು ದಾನವಾಗಿ ನೀಡುವುದು ಸೂಕ್ತ. ಜಿಲ್ಲೆಯಲ್ಲಿ ರಕ್ತದ ಕೊರತೆಯಿದ್ದು, ರಕ್ತದಾನ ಶಿಬಿರಗಳ ಸಂಖ್ಯೆಯನ್ನು ಹೆಚ್ಚಿಸಿ ರಕ್ತವನ್ನು ಸಂಗ್ರಹಿಸುವ ಅನಿವಾರ್ಯತೆಯಿದೆ ಎಂದು ಹೇಳಿದರು.

ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಖಜಾಂಜಿ ಪ್ರಸಾದ್ ಗೌಡ, ಜಂಟಿ ಕಾರ್ಯದರ್ಶಿ ವಸಂತ್ ಕುಮಾರ್, ಪ್ರಸಾದ್, ಪ್ರಧಾನ ಕಾರ್ಯದರ್ಶಿ ಡಿ.ಟಿ. ಪುರುಷೋತ್ತಮ್, ಸಂಘದ ನಿರ್ದೇಶಕರಾದ ಎ.ಕೆ. ವಿನೋದ್, ಪ್ರಸಾದ್, ಚಂದ್ರಶೇಖರ್, ಕಿರಣ್ ಕುಂದರ್, ಧನಂಜಯ್ ಶಾಸ್ತ್ರಿ, ಗೌತಮ್ ಪ್ರಸಾದ್, ವಿವೇಕ್, ಹಾಗೂ . ಕೊಡಗಿನ ಹಲವಾರು ಕಡೆಗಳಿಂದ ಬಂದಿದ್ದ ಔಷಧಿ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಔಷಧಿ ವ್ಯಾಪಾರಸ್ಥರು ಪಾಲ್ಗೊಂಡರು. ಶಿಬಿರದಲ್ಲಿ 23 ಯೂನಿಟ್‌ಗಳಷ್ಟು ರಕ್ತ ಸಂಗ್ರಹವಾಯಿತು. ಈ ವರ್ಷದಿಂದ ರಾಜ್ಯ ಸರ್ಕಾರವು ಔಷಧಿ ವ್ಯಾಪಾರಸ್ಥರ ದಿನದಂದು ಆಯಾ ಜಿಲ್ಲೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಔಷಧಿ ವ್ಯಾಪಾರಸ್ಥರಿಗೆ ಗೌರವ ಸನ್ಮಾನ ನೆರವೇರಿಸುತ್ತಿದೆ. ಈ ಬಾರಿ ವೀರಾಜಪೇಟೆಯ ಶ್ರೀ ಗಣೇಶ ಮೆಡಿಕಲ್ಸ್ನ ಎಂ. ಸುದರ್ಶನ್ ರೈ ಈ ಗೌರವಕ್ಕೆ ಭಾಜನರಾಗಿದ್ದು ಸುದÀರ್ಶನ್ ರೈ ಮತ್ತು ಪತ್ನಿ ವಿಜಯಲಕ್ಷ್ಮಿ ರೈ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net