ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವಿಸಿ

Everyone should consume nutritious food.
 9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಸೀಮಂತ ಕಾರ್ಯಕ್ರಮದಲ್ಲಿ ಸುಮಂಗಲಾ ಜಿ.ಹಿರೇಮನಿ, ಪ್ರಸನ್ನ ಕುಮಾರ್, ಮಹೇಶ್, ಸವಿತಾ ಕೀರ್ತನ್ ಇತರರಿದ್ದರು.
9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಸೀಮಂತ ಕಾರ್ಯಕ್ರಮದಲ್ಲಿ ಸುಮಂಗಲಾ ಜಿ.ಹಿರೇಮನಿ, ಪ್ರಸನ್ನ ಕುಮಾರ್, ಮಹೇಶ್, ಸವಿತಾ ಕೀರ್ತನ್ ಇತರರಿದ್ದರು. Everyone should consume nutritious food.
Published on

ಮಡಿಕೇರಿ: ಮಡಿಕೇರಿ: ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಶೇ.100 ಫಲಾನುಭವಿಗಳ ನೋಂದಣಿಗಾಗಿ ಪೋಷಣೆಯೊಂದಿಗೆ ಮಾತೃ ವಂದನ ವಿಶೇಷ ನೋಂದಣಿ ಹಾಗೂ ನಾಗರಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸುಮಂಗಲಾ ಜಿ.ಹಿರೇಮನಿ ತಿಳಿಸಿದರು.

ನಗರದ ಅಶೋಕ್ ಪುರ ಅಂಗನವಾಡಿ ಕೇಂದ್ರದಲ್ಲಿ ನಡೆದ ಪೋಷಣೆಯೊಂದಿಗೆ ಮಾತೃ ವಂದನ ವಿಶೇಷ ನೋಂದಣಿ ಹಾಗೂ ನಾಗರಿಕ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.

ಅರ್ಹರಾದ ಎಲ್ಲ ಗರ್ಭಿಣಿಯರು ಮತ್ತು ಬಾಣಂತಿಯರನ್ನು ಗುರುತಿಸಿ ಯೋಜನೆ ವ್ಯಾಪ್ತಿಗೆ ತರುವುದು ಅಭಿಯಾನದ ಉದ್ದೇಶ. ಯಾವುದೇ ಅರ್ಹ ಫಲಾನುಭವಿ ಸೌಲಭ್ಯದಿಂದ ವಂಚಿತರಾಗಬಾರದು. ಪ್ರತಿಯೊಬ್ಬರೂ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂದು ಕರೆ ನೀಡಿದರು.

ಇಲಾಖೆಯ ನಿರೂಪಣಾಧಿಕಾರಿ ಪ್ರಸನ್ನ ಕುಮಾರ್ ಮಾತನಾಡಿ, ಮಾತೃ ವಂದನಾ ಯೋಜನೆಯ ಅರ್ಹತಾ ಮಾನದಂಡ, ಪ್ರಯೋಜನ, ಕಂತು ಹಾಗೂ ಅರ್ಜಿ ಪ್ರಕ್ರಿಯೆ ಬಗ್ಗೆ ವಿವರಿಸಿದರು. ಬೇಟಿ ಬಚಾವೋ-ಬೇಟಿ ಪಡಾವೋ, ಭಾಗ್ಯಲಕ್ಷ್ಮಿ ಮತ್ತು ಗೃಹಲಕ್ಷ್ಮಿ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಮಾತನಾಡಿ, ಕಾಮನಬಿಲ್ಲಿನಲ್ಲಿ ವಿವಿಧ ಬಣ್ಣಗಳಿರುವಂತೆ ನಮ್ಮ ಆಹಾರದಲ್ಲಿಯೂ ವಿವಿಧ ಬಣ್ಣಗಳ ಪೌಷ್ಟಿಕ ಆಹಾರ ಇರಬೇಕು. ತಾಜಾ ಮತ್ತು ಬಿಸಿ ಆಹಾರ ಸೇವನೆಯಿಂದ ಮಕ್ಕಳ ಸಮಗ್ರ ಬೆಳವಣಿಗೆ ಸಾಧ್ಯ ಎಂದು ಹೇಳಿದರು.

ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಮುಂದಿನ ಅ. 8ರವರೆಗೆ ಪೋಷಣ್ ಮಾಸಾಚರಣೆಯಡಿ ಅಂಗನವಾಡಿ ನಿರ್ವಹಣಾ ಸಮಿತಿ, ಬಾಲವಿಕಾಸ ಸಮಿತಿ, ಸ್ವಸಹಾಯ ಸಂಘ, ಗ್ರಾಮ ಪಂಚಾಯಿತಿ ಸದಸ್ಯರ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅಂಗನವಾಡಿಗಳಲ್ಲಿ ದಿನವಾರು ಮೆನು ಫಲಕ, 0-3 ವರ್ಷದ ಮಕ್ಕಳ 34 ಅಭಿವೃದ್ಧಿ ಮೈಲುಗಲ್ಲುಗಳ ಪಟ್ಟಿ ಪ್ರದರ್ಶಿಸಬೇಕು. ಪೌಷ್ಟಿಕ ಕೈತೋಟ, ತರಕಾರಿ ಪಾಟ್ ನಿರ್ಮಿಸಬೇಕು ಎಂದು ಸೂಚಿಸಿದರು.

ಯೋಜನಾ ಸಂಯೋಜಕಿ ನವ್ಯಾ, ಪೋಷಣ್ ಅಭಿಯಾನದ ಜಿಲ್ಲಾ ಸಂಯೋಜಕಿ ಕಾವ್ಯಾ, ಡಾ.ನಿಶ್ವಿಕಾ, ದಿವ್ಯಾ, ಆಶಾ ಕಾರ್ಯಕರ್ತೆ ದೇವಿ, ಅಂಗನವಾಡಿ ಕಾರ್ಯಕರ್ತೆಯರು, ಫಲಾನುಭವಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net