ತಾಳತ್ತಮನೆಯಲ್ಲಿ ಅಣಬೆ ಕೃಷಿ ತರಬೇತಿ

ತಾಳತ್ತಮನೆಯಲ್ಲಿ ಅಣಬೆ ಕೃಷಿ ತರಬೇತಿ
ಸ್ವಾವಲಂಬಿ ಬದುಕಿಗೆ ಅಣಬೆ ಕೃಷಿ ವಿಷಯದ ಕುರಿತು ತಾಳತ್ತಮನೆಯಲ್ಲಿ ನಡೆದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಪ್ರಗತಿಪರ ಕೃಷಿಕÀ ಚಟ್ಟೋಳೀರ ಗಿರೀಶ್ ಅಪ್ಪಯ್ಯ ಮಾತನಾಡಿದರು. ಡಾ. ಲತಾ, ಎಂ.ಎನ್. ಮೋಹಿನಿ, ಅಧ್ಯಕ್ಷ ಪಿ.ವಿ. ಆನಂದ್ ಕುಮಾರ್ ಮತ್ತಿತರರು ಇದ್ದರು.
Published on: 

ಮಡಿಕೇರಿ

ಯುವಜನತೆ ಹಾಗೂ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಮಡಿಕೇರಿ ತಾಲೂಕು ತಾಳತ್ತಮನೆಯಲ್ಲಿ ಸ್ವಾವಲಂಬಿ ಬದುಕಿಗೆ ಅಣಬೆ ಕೃಷಿ ವಿಷಯದ ಕುರಿತು ವಿಶೇಷ ತರಬೇತಿ ಕಾರ್ಯಾಗಾರ ಬುಧವಾರ ನಡೆಯಿತು.

ನೆಹರು ಯುವ ಕೇಂದ್ರ ಮಡಿಕೇರಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಡಿಕೇರಿ, ತಾಲೂಕು ಯುವ ಒಕ್ಕೂಟ ಮಡಿಕೇರಿ, ತಾಳತ್ತಮನೆಯ ನೇತಾಜಿ ಯುವಕ ಮಂಡಲ ಹಾಗೂ ನೇತಾಜಿ ಯುವತಿ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ತಾಳತ್ತಮನೆಯ ನೇತಾಜಿ ಯುವಕ ಮಂಡಲ ಸಭಾಂಗಣದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ತಾಳತ್ತಮನೆ ಶ್ರೀ ದುರ್ಗಾಭಗವತಿ ದೇವಸ್ಥಾನದ ಅಧ್ಯಕ್ಷರು ಹಾಗೂ ಪ್ರಗತಿಪರ ಕೃಷಿಕÀ ಚಟ್ಟೋಳೀರ ಗಿರೀಶ್ ಅಪ್ಪಯ್ಯ, ಯುವಜನತೆ ಹಾಗೂ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕು ಸಾಗಿಸಬೇಕು ಎಂದರಲ್ಲದೆ ಕೃಷಿಯಲ್ಲಿನ ಆಧುನಿಕ ಸಾಧ್ಯತೆಗಳ ಕುರಿತು ವಿವರಿಸಿದರು.

ಮಡಿಕೇರಿ ಕೃಷಿ ವಿಸ್ತರಣಾ ಘಟಕದ ವಿಜ್ಞಾನಿ ಡಾ. ಲತಾ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿ ಅಣಬೆ ಕೃಷಿಯ ವೈಜ್ಞಾನಿಕ ವಿಧಾನಗಳು ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು ಮಾಹಿತಿ ನೀಡಿದರು.

ನರಿಯಂದಡದ ಪ್ರಗತಿಪರ ರೈತ ಮಹಿಳೆ ಬಿ.ಎ. ಅಂಬಿಕಾ ಅಣಬೆ ಕೃಷಿ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿ, ಅದರ ಲಾಭ, ಮಾರುಕಟ್ಟೆ ಬೇಡಿಕೆ ಹಾಗೂ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊAಡರು.

ನೇತಾಜಿ ಯುವತಿ ಮಂಡಳಿಯ ಅಧ್ಯಕ್ಷೆ ಎಂ.ಎನ್. ಮೋಹಿನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೇತಾಜಿ ಯುವಕ ಮಂಡಲದ ಅಧ್ಯಕ್ಷ ಪಿ.ವಿ. ಆನಂದ್ ಕುಮಾರ್, ಕಾರ್ಯದರ್ಶಿ ಬಿ.ಬಿ. ಹರೀಶ್ ರೈ, ನೇತಾಜಿ ಯುವತಿ ಮಂಡಳಿಯ ಕಾರ್ಯದರ್ಶಿ ಪಲ್ಲವಿ ರೈ ಸೇರಿದಂತೆ ಎರಡೂ ಮಂಡಳಿಗಳ ಸರ್ವ ಸದಸ್ಯರು, ಯುವಜನತೆ ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತರಬೇತಿಯ ಸದುಪಯೋಗ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net