ಸಿದ್ದಾಪುರ: ಕರಡಿಗೋಡು ಸಮೀಪ ಸೋಮವಾರ ಮುಂಜಾನೆ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರನ ಮೇಲೆ ಕಾಡಾನೆ ದಾಳಿಗೆ ಯತ್ನಿಸಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕರಡಿಗೋಡು ಇವಾಲ್ಟ್ ಬ್ಯಾಕ್ ರೆಸಾರ್ಟ್‌ನ ಉದ್ಯೋಗಿ ಪುಟ್ಟುಸ್ವಾಮಿ ಅವರು ಮನೆಯಿಂದ ಕೆಲಸದ ಸ್ಥಳಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿಗೆ ಮುಂದಾಗಿದೆ. ಅಪಾಯ ಅರಿತ ಸವಾರ ಬೈಕ್ ಬಿಟ್ಟು ಓಡಿದ ಪರಿಣಾಮ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.