ಚಾಲಕರು, ಮೋಟಾರು ಕೆಲಸಗಾರರಿಗೆ ಕ್ರೀಡಾಕೂಟ

ಆಯುಧ ಪೂಜೆ ಪ್ರಯುಕ್ತ ಆಯೋಜನೆ
ಸೋಮವಾರಪೇಟೆ
ಸೋಮವಾರಪೇಟೆ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಸದಸ್ಯರಿಗೆ ಅಯೋಜಿಸಿದ್ದ ಕ್ರೀಡಾಕೂಟಕ್ಕೆ ಚೌಡ್ಲು ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಚಾಲನೆ ನೀಡಿದರು. ಬಾಲಕೃಷ್ಣ, ನತೀಶ್, ರಂಗಸ್ವಾಮಿ ಇದ್ದರು.ಸೋಮವಾರಪೇಟೆ
Published on: 

ಸೋಮವಾರಪೇಟೆ: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿಂದ ಆಯುದ ಪೂಜೆ ಕಾರ್ಯಕ್ರಮದ ಪ್ರಯುಕ್ತ ಸಂಘದ ಸದಸ್ಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಚೌಡ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ವಹಿಸಿದ್ದರು. ಈ ಸಂದರ್ಭ ಚೌಡ್ಲು ಗ್ರಾಪಂ ಮಾಜಿ ಉಪಾಧ್ಯಕ್ಷ ನತೀಶ್ ಮಂದಣ್ಣ, ಸಂಘದ ಉಪಾಧ್ಯಕ್ಷ ಬಿ.ಎನ್.ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಣಿ ಕುಶಾಲಪ್ಪ, ಖಜಾಂಚಿ ಡ್ಯಾನಿ ಡೋಮಿನಿಕ್, ಸಹ ಕಾರ್ಯದರ್ಶಿ ಎಂ.ಎಂ. ಕಿರಣ್ ಹಾಗೂ ಎಸ್.ಎಂ. ಕೃಷ್ಣ ಇತರರು ಇದ್ದರು.

ಕಬಡ್ಡಿ ಪಂದ್ಯ ವಿಜೇತರು: ಮೊದಲ ಬಹುಮಾನವನ್ನು ಕೆ.ಎನ್. ಶರತ್ ತಂಡ ಪಡೆಯಿತು. ಎ.ಸಿ.ವಿನಯ್ ತಂಡ ದ್ವಿತೀಯ, ತೃತೀಯ ಸ್ಥಾನವನ್ನು ಸತೀಶ್ ಮತ್ತು ತಂಡ ಪಡೆದುಕೊಂಡಿತು.

ಹಗ್ಗ ಜಗ್ಗಾಟದಲ್ಲಿ ಪ್ರಸನ್ನ ತಂಡ (ಪ್ರ), ಕೆ.ಎನ್.ಹರೀಶ್ ಮತ್ತು ತಂಡ (ದ್ವಿ) ಹಾಗೂ ಮಹೇಶ್ ಮತ್ತು ತಂಡ (ತೃ) ಬಹುಮಾನ ಪಡೆದುಕೊಂಡರು. ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಸಿ.ಎಂ. ಶಿವಣ್ಣ (ಪ್ರ), ಯು.ಎಂ. ಸುಕಾಂತ್ (ದ್ವಿ) ಹಾಗೂ ಎಸ್.ಬಿ. ರಮೇಶ್ (ತೃ) ಬಹುಮಾನ ಪಡೆದರು. ಬಾಂಬ್ ಇನ್ ದಿ ಸಿಟಿ ಸ್ಪರ್ಧೆಯಲ್ಲಿ ಸಿ.ಎಂ. ಶಿವಣ್ಣ (ಪ್ರ), ಯು.ಟಿ. ಚಂದ್ರಶೇಖರ್ (ದ್ವಿ) ಹಾಗೂ ಎಸ್.ಬಿ.ರಮೇಶ್ (ತೃ) ಬಹುಮಾನ ಪಡೆದಕೊಂಡರು. 100 ಮೀಟರ್ ಓಟದ ಸ್ಪರ್ಧೆಯಲ್ಲಿ ಯು.ಎಂ. ಸುಕಾಂತ್ (ಪ್ರ), ಎ.ಕೆ.ಪ್ರಕಾಶ್ (ದ್ವಿ), ಹಾಗೂ ಬಿ.ಜಿ. ಕೃಷ್ಣಪ್ಪ (ತೃ) ಬಹುಮಾನ ಪಡೆದರು. 200 ಮೀಟರ್ ಓಟದ ಸ್ಪರ್ಧೆಯಲ್ಲಿ ಕೆ.ಎನ್. ಶರತ್ (ಪ್ರ), ಎಚ್.ಪಿ. ದುಶಾಂತ್ (ದ್ವಿ) ಹಾಗೂ ಕೆ.ಎ. ಮಿಥುನ್ ತೃತೀಯ ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net