ಕೈಲ್ ಪೊಳ್ದ್ ಹಿನ್ನೆಲೆಯಲ್ಲಿ ಪೂಜೆ

ಕೊಡಗಿನ ಸಾಂಪ್ರದಾಯಿಕ ಕೈಲ್ ಪೊಳ್ದ್ ಹಬ್ಬದ ಮುಂಚಿತವಾಗಿ ಚೆಟ್ಟಳ್ಳಿಯ ಶ್ರೀಮಂಗಲ ಶ್ರೀಭಗವತಿ ದೇವಾಲಯದಲ್ಲಿ ಕೈಲ್ ಪೊಳ್ದ್ ಧಾರೆ ಪೂಜೆ ನೆರವೇರಿತು. ಹಿರಿಯರಾದ ಬಟ್ಟಿರ ಕಾವೇರಪ್ಪ ಮತ್ತಿತರರು ಈ ಸಂದರ್ಭ ಇದ್ದರು.
ಕೊಡಗಿನ ಸಾಂಪ್ರದಾಯಿಕ ಕೈಲ್ ಪೊಳ್ದ್ ಹಬ್ಬದ ಮುಂಚಿತವಾಗಿ ಚೆಟ್ಟಳ್ಳಿಯ ಶ್ರೀಮಂಗಲ ಶ್ರೀಭಗವತಿ ದೇವಾಲಯದಲ್ಲಿ ಕೈಲ್ ಪೊಳ್ದ್ ಧಾರೆ ಪೂಜೆ ನೆರವೇರಿತು. ಹಿರಿಯರಾದ ಬಟ್ಟಿರ ಕಾವೇರಪ್ಪ ಮತ್ತಿತರರು ಈ ಸಂದರ್ಭ ಇದ್ದರು.
Published on
ಮಡಿಕೇರಿ:
ಕೊಡಗಿನ ಸಾಂಪ್ರದಾಯಿಕ ಕೈಲ್ ಪೊಳ್ದ್ ಹಬ್ಬದ ಮುಂಚಿತವಾಗಿ ಚೆಟ್ಟಳ್ಳಿಯ ಶ್ರೀಮಂಗಲ ಶ್ರೀಭಗವತಿ ದೇವಾಲಯದಲ್ಲಿ ಕೈಲ್ ಪೊಳ್ದ್ ಧಾರೆ ಪೂಜೆ ಸಂಪ್ರದಾಯ ಬದ್ಧವಾಗಿ ಗುರುವಾರ ನೆರವೇರಿತು. ತಕ್ಕ ಮುಖ್ಯಸ್ಥರು ಹಾಗೂ ಊರಿನವರ ಸಮ್ಮುಖದಲ್ಲಿ ನಡೆದ ಪೂಜಾ ವಿದಿವಿಧಾನಗಳಲ್ಲಿ ಪುರಾತನ ಕಾಲದಿಂದ ನಡೆದು ಕೊಂಡು ಬರುತ್ತಿರುವ ಸಂಪ್ರದಾಯವನ್ನು ಮುಂದುವರಿಸಲಾಯಿತು.
ಸೆ. 3ರಂದು ಸಾಂಪ್ರದಾಯಿಕವಾಗಿ ಕೈಲ್ ಪೊಳ್ದ್ ಆಚರಣೆ ನಡೆಯಲಿದ್ದು, ನಾಡಿನ ಜನರಿಗೆ ಒಳಿತಾಗಲಿ ಎಂದು ಕುಲದೇವರಾದ ಇಗ್ಗುತಪ್ಪ, ಕಾವೇರಮ್ಮೆ ಹಾಗೂ ಗ್ರಾಮ ದೇವರಲ್ಲಿ ಹಿರಿಯರಾದ ಬಟ್ಟಿರ ಕಾವೇರಪ್ಪ ಅವರು ಪ್ರಾರ್ಥಿಸಿದರು. ಮಹಾಮಂಗಳಾರತಿ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net