ಸಮಾಜದಲ್ಲಿ ಸೇವಾ ಕಾರ್ಯಗಳು ಹೆಚ್ಚಲಿ

ಸಮಿತಿಯ ಅಧ್ಯಕ್ಷ ಬಿ.ಆರ್.ಚಂದ್ರಹಾಸ್ ಆಶಿಸಿದರು
guru samithi
ಶನಿವಾರಸಂತೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ನಾರಾಯಣ ಗುರು ಸೇವಾ ಸಮಿತಿ ವಾರ್ಷಿಕ ಸಭೆಯಲ್ಲಿ ನಾರಾಯಣಗುರುಗಳ ಭಾವ ಚಿತ್ರಕ್ಕೆ ಪ್ರಮುಖರು ಪೂಜೆ ಸಲ್ಲಿಸಿದರು. ಬಿ.ಆರ್.ಚಂದ್ರಹಾಸ್, ಇಂದಿರಾ ಮೊಣಪ್ಪ, ಸುಂದರ್ ಇತರರು ಇದ್ದರು. narayana
Published on: 

ಶನಿವಾರಸಂತೆ : ಶ್ರೀ ನಾರಾಯಣ ಗುರು ಸೇವಾ ಸಮಿತಿಯ ವಾರ್ಷಿಕ ಸಭೆ ಇಲ್ಲಿನ ಅಲೋಕ

ಸಭಾಂಗಣದಲ್ಲಿ ಭಾನುವಾರ ಕರೆಯಲಾಗಿತ್ತು. ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ವಿವಿಧ ಚಟುವಟಿಕೆಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲೂ ಇನ್ನಷ್ಟು ಸೇವಾಕಾರ್ಯ ನೆರವೇರಲಿ ಎಂದು ಸಮಿತಿಯ ಅಧ್ಯಕ್ಷ ಬಿ.ಆರ್.ಚಂದ್ರಹಾಸ್ ಆಶಿಸಿದರು.ಪ್ರಧಾನ ಕಾರ್ಯದರ್ಶಿ ಇಂದಿರಾ ಮೊಣಪ್ಪ ಮಾತನಾಡಿ, ಒಗ್ಗಟ್ಟಿನಿಂದ ಮುನ್ನಡೆದರೆ ಸೇವಾ ಕಾರ್ಯಗಳು ಇನ್ನಷ್ಟು ವಿಸ್ತರಣೆಗೊಳ್ಳುತ್ತದೆ ಎಂದರು.

ಸಂಘದ ಉಪಾಧ್ಯಕ್ಷರಾದ ಸುಂದರ್, ಇಂದಿರಾ ಮೊಣಪ್ಪ, ಯಶೋದಾ ಚಂದ್ರಶೇಖರ್, ಬಿ.ಎ. ಭಾಸ್ಕರ್, ಖಜಾಂಚಿ ರಮೇಶ್ ಮಾತನಾಡಿದರು. ಕಳೆದ ಸಾಲಿನಲ್ಲಿ ಮೃತಪಟ್ಟ ಸಂಘದ ಸದಸ್ಯರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಸಮುದಾಯ ಭವನ ನಿರ್ಮಿಸಿ: ಸಂಘದ ಹೆಸರಿನಲ್ಲಿ ನಿವೇಶನ ಇದ್ದರೂ ಸಮುದಾಯ ಭವನ ನಿರ್ಮಾಣ ಕನಸು ಈಡೇರಿಲ್ಲ. ಈ ಬಾರಿಯಾದರೂ ಆಡಳಿತ ಮಂಡಳಿಯ ಪ್ರಮುಖರು ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂದು ಸಭೆಯಲ್ಲಿ ಮುಖಂಡರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net