ಶಿರಂಗಾಲದಲ್ಲಿ ಹಾಲು ಕರೆಯುವ ಸ್ಪರ್ಧೆ

ಶಿರಂಗಾಲದ ಸಂತೆಮಾಳದ ಮೈದಾನದಲ್ಲಿ ಏರ್ಪಡಿಸಿದ್ದ ಹಾಲು ಕರೆಯುವ ಸ್ಪರ್ಧೆಯನ್ನು ಜಿಲ್ಲಾ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಲಿಂಗರಾಜ ದೊಡ್ಡಮನಿ ಉದ್ಘಾಟಿಸಿದರು. ಡಾ. ಸಂಜಿವ್ ಆರ್. ಸಿಂಧೆ, ಸುರೇಶ್, ಮೋಹನ್, ಪ್ರಕಾಶ್, ಗಂಗಾಧರ್, ಕುಮಾರ ಸ್ವಾಮಿ ಮತ್ತಿತರರು ಇದ್ದರು.
ಶಿರಂಗಾಲದ ಸಂತೆಮಾಳದ ಮೈದಾನದಲ್ಲಿ ಏರ್ಪಡಿಸಿದ್ದ ಹಾಲು ಕರೆಯುವ ಸ್ಪರ್ಧೆಯನ್ನು ಜಿಲ್ಲಾ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಲಿಂಗರಾಜ ದೊಡ್ಡಮನಿ ಉದ್ಘಾಟಿಸಿದರು. ಡಾ. ಸಂಜಿವ್ ಆರ್. ಸಿಂಧೆ, ಸುರೇಶ್, ಮೋಹನ್, ಪ್ರಕಾಶ್, ಗಂಗಾಧರ್, ಕುಮಾರ ಸ್ವಾಮಿ ಮತ್ತಿತರರು ಇದ್ದರು.
Published on
ಮಡಿಕೇರಿ:
ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕುಶಾಲನಗರ ಪಶುವೈದ್ಯ ಆಸ್ಪತ್ರೆ, ಶಿರಂಗಾಲ ಹಾಲು ಉತ್ಪಾದಕರ ಸಹಕಾರ ಸಂಘ, ಶಿರಂಗಾಲ ಗ್ರಾಮ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ 2025-26 ಸಾಲಿನ ವಿಸ್ತರಣಾ ಚಟುವಟಿಕೆ, ಬಲ ಪಡಿಸುವ ಯೋಜನೆಯ ಅಡಿಯಲ್ಲಿ ಹಾಲು ಕರೆಯುವ ಸ್ಪರ್ಧೆಯನ್ನು ಶಿರಂಗಾಲ ಸಂತೆಮಾಳದ ಮೈದಾನದಲ್ಲಿ ಶನಿವಾರ ಏರ್ಪಡಿಸಲಾಗಿತ್ತು.
ಜಿಲ್ಲಾ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಲಿಂಗರಾಜ ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿರುವ ಗ್ರಾಮಸ್ಥರು ಹಸುಗಳ ಆರೋಗ್ಯದ ಕಡೆಗೆ ಒತ್ತು ನೀಡಬೇಕು, ಇಲಾಖೆಯ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಕುಶಾಲನಗರ ಪಶುವೈದ್ಯ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸಂಜಿವ್ ಆರ್. ಸಿಂಧೆ ಮಾತಾನಾಡಿ ರೈತರ ಬದುಕಿಗೆ ಪೂರಕವಾದ ಹೈನುಗಾರಿಕೆ ಗ್ರಾಮಾಂತರ ಪ್ರದೇಶದ ಜನ ಬದುಕಿನ ಆಶಾಕಿರಣವಾಗಿದೆ. ಕುಶಾಲನಗರ ತಾಲೂಕು ವ್ಯಾಪ್ತಿಯ ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ವಿವಿಧ ಸಲವತ್ತುಗಳು, ರೇಬೀಸ್ ತಪಾಸಣೆ ನಡೆಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಮೋಹನ್, ಪ್ರಕಾಶ್, ಗಂಗಾಧರ್, ಕುಮಾರ ಸ್ವಾಮಿ, ಹೇಮ, ಚಂದಿಕಾ, ಸಂಘದ ಕಾರ್ಯದರ್ಶಿ ಅಭಿಲಾಷ್ ಮತ್ತಿತರರು ಇದ್ದರು.
ಹಾಲು ಕರೆಯುವ ಸ್ಪರ್ಧೆಯಲ್ಲಿ ಹೆಚ್. ಎಫ್ . ಹಸುವಿನಲ್ಲಿ ಶಿರಂಗಾಲ ನಾಗರಾಜ್ ಪ್ರಥಮ, ಕುಮಾರ ಸ್ವಾಮಿ ದ್ವಿತೀಯ ಹಾಗೂ ಚಂದ್ರಿಕಾ ತೃತೀಯ ಸ್ಥಾನ ಪಡೆದರು. ಜೆರ್ಸಿ ಹಸುಗಳ ವಿಭಾಗದಲ್ಲಿ ಪ್ರಮೋದ್ ಪ್ರಥಮ, ಮಂಜುನಾಥ ದ್ವೀತಿಯ ಹಾಗೂ ಲೀಲಾವತಿ ತೃತೀಯ ಬಹುಮಾನ ಪಡೆದುಕೊಂಡರು. ಹಳ್ಳಿಕಾರ್ ವಿಭಾಗದಲ್ಲಿ ಶಿರಂಗಾಲದ ಎಂ. ಆರ್. ಮಂಜುನಾಥ ಮತ್ತು ಮೂಡಲುಕೊಪ್ಪಲುವಿನ ನಾಗರಾಜ್ ಬಹುಮಾನ ಗಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net