ಚೆಟ್ಟಳ್ಳಿ ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನ ಉದ್ಘಾಟನೆ

ಕುಶಾಲನಗರ ತಾಲೂಕು ಚೆಟ್ಟಳ್ಳಿಯ ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶ್ರಮಿಸಿದರವರನ್ನು ಸನ್ಮಾನಿಸಲಾಯಿತು. ಡಾ. ಮಂತರ್ ಗೌಡ, ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಬಲ್ಲಾರಂಡ ಮಣಿ ಉತ್ತಪ್ಪ, ಆನಂದ ಕರಂದ್ಲಾಜೆ ಮತ್ತಿತರರು ಇದ್ದರು.
ಕುಶಾಲನಗರ ತಾಲೂಕು ಚೆಟ್ಟಳ್ಳಿಯ ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶ್ರಮಿಸಿದರವರನ್ನು ಸನ್ಮಾನಿಸಲಾಯಿತು. ಡಾ. ಮಂತರ್ ಗೌಡ, ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಬಲ್ಲಾರಂಡ ಮಣಿ ಉತ್ತಪ್ಪ, ಆನಂದ ಕರಂದ್ಲಾಜೆ ಮತ್ತಿತರರು ಇದ್ದರು.
Published on
ಮಡಿಕೇರಿ:
ಗೌಡ ಸಮುದಾಯ ಸಮಾಜದಲ್ಲಿರುವ ಇತರ ಸಮುದಾಯದೊಂದಿಗೆ ಸೌರ್ಹಾದತೆಯಿಂದ ಇದ್ದಾರೆ. ಇತರ ಸಮುದಾಯಗಳ ನಡುವೆ ಭಾವನಾತ್ಮಕ ಸಂಬAಧ ಅಗತ್ಯವಾಗಿದ್ದು ಜನಾಂಗದ ಸಂಸ್ಕöÈತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ನಾವು ಮಾಡಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಕುಶಾಲನಗರ ತಾಲೂಕು ಚೆಟ್ಟಳ್ಳಿಯ ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಭಾನುವಾರ ಮಾತನಾಡಿದರು.
ಗೌಡ ಸಮುದಾಯ ಎಲ್ಲಾ ಕ್ಷೇತ್ರಗಳಿಗೂ ತನ್ನದೇ ಆದ ಕೊಡುಗೆ ನೀಡಿದೆ. ರಾಜಕಾರಣಿಗಳು ರಾಜಕೀಯ ಮಾಡುತ್ತಾರೆ. ರಾಜಕೀಯ ಚುನಾವಣೆಗೆ ಸೀಮಿತವಾಗಬೇಕೇ ಹೊರತು ಜೀವನಕ್ಕಲ್ಲ. ನಿಜಜೀವನದಲ್ಲಿ ಜಾತಿ ಮತ ಧರ್ಮವೆನ್ನುವ ಭೇಧ ಭಾವಮರೆತು ಸದಾ ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯಬೇಕು. ಈ ಸಮುದಾಯ ಭವನ ಎಲ್ಲಾ ಜನಾಂಗ ಬಾಂದವರಿಗೆ ದೊರಕುವಂತಾಗಿ ಚೇರಳ ಗ್ರಾಮ ವಿಶ್ವಮಾನವ ಸಂದೇಶ ಸಾರುವಂತಾಗಬೇಕು ಎಂದರು.
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ ಸುಮಾರು 17 ವರ್ಷಗಳ ಸತತ ಪ್ರಯತ್ನದ ನಂತರ ನೂತನ ಭವ್ಯವಾದ ಸಮುದಾಯ ಭವನ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ. ನಮ್ಮ ಸಂಪ್ರದಾಯದ ಬೆಳವಣಿಗೆಗೆ ಪೂರಕವಾಗಿ ಸಮುದಾಯ ಭವನ ತಲೆಯೆತ್ತಿದೆ. ಇದು ಇಲ್ಲಿನ ಎಲ್ಲ ಸಮುದಾಯ ಬಾಧವರಿಗೂ ದೊರಕುವಂತಾಗಿ ಸಹಬಾಳ್ವೆಯಿಂದ ಜೀವನ ಸಾಗಿಸುವಂತಾಗಬೇಕು ಎಂದು ಹೇಳಿದರು.
ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ ನಾವೆಲ್ಲರೂ ಅನ್ಯೋನ್ಯತೆಯಿಂದ ಬಾಳಬೇಕು. ಗೌಡ ಮತ್ತು ಕೊಡವ ಸಮುದಾಯದ ನಡುವೆ ಉತ್ತಮ ಬಾಂಧವ್ಯವಿದ್ದು ಮದುವೆಯಂಥ ಸಂಬAಧಗಳಿವೆ. ಹಾಗಿರುವಾಗ ನಾವೆಲ್ಲರೂ ಒಗ್ಗಟ್ಟಾಗಿ ಬದುಕಬೇಕು. ಇಲ್ಲಿ ಬೇಧಭಾವ ಕಾಣಬಾರದು. ಈ ಹಿಂದೆ ಇಲ್ಲಿನ ಅನೇಕ ಕುಟುಂಬಗಳಿಗೆ ತಾವು ವಾಸವಿರುವ ಸ್ಥಳಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಆ ಸ್ಥಳವನ್ನು ಯಾರಿಗೂ ಮಾರಾಟ ಮಾಡದೆ ಉಳಿಸಿಕೊಂಡು ಹೋಗುವಂತಾಗಬೇಕು ಎಂದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಮಾತನಾಡಿ ಪ್ರತಿಯೊಬ್ಬರೂ ತಮ್ಮಿಂದ ಆದಷ್ಟು ಅಳಿಲು ಸೇವೆಯನ್ನು ಸಮಾಜದ ಉಳಿವಿಗಾಗಿ ಮಾಡಬೇಕು. ದಾನ ಮಾಡಿದರೆ ಮಾತ್ರ ಸಮಾಜ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಇಂದಿನಿAದಲೇ ಎಲ್ಲರೂ ಒಂದಷ್ಟು ಹಣವನ್ನು ಸಮಾಜದ ಏಳಿಗೆಗೆ ಅಂತ ಮೀಸಲಿಡುವಂತೆ ಕರೆ ನೀಡಿದರು.
ಒಕ್ಕೂಟಉಪಾಧ್ಯಕ್ಷ ಡಾ. ತೇನನ ರಾಜೇಶ್, ಕೊಡಗು ಗೌಡ ಸಮಾಜದ ಮಾಜಿ ಅಧ್ಯಕ್ಷ ಪೇರಿಯನ ಜಯಾನಂದ, ಜಿ.ಪಂ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿದರು.
ಚೇರಳ ಗೌಡ ಸಮಾಜದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಂಬಾರನ ಕುಂತಿ ಬೋಪಯ್ಯ, ಕಾಫಿ ಬೆಳೆಗಾರ ಮರದಾಳು ಬಸಪ್ಪ, ಆಡಳಿತ ಮಂಡಳಿಯ ವಿಶೇಷ ಸಲಹೆಗಾರ ಮೇಚನ ವಾಸು, ಉಪಾಧ್ಯಕ್ಷ ಹೊಸಮನೆ ಪೂವಯ್ಯ, ಖಜಾಂಚಿ ಮುಕ್ಕಾಟಿರ ಪಳಂಗಪ್ಪ, ಉಪ ಕಾರ್ಯದರ್ಶಿಗಳಾದ ಮರದಾಳು ಜನರ್ದನ, ನೂಜಿಬೈಲು ನಾಣಯ್ಯ, ಸಮಘಟನಾ ಕಾರ್ಯದರ್ಶಿ ಪೇರಿಯನ ಪೂಣಚ್ಚ, ಉಪ ಖಜಾಂಚಿ ಪೇರಿಯನ ಉದಯಕುಮಾರ್ ಮತ್ತಿತರರು ಇದ್ದರು.
Àವರು ನೆಲದಲ್ಲಿ ಪ್ರತಿ ಹೆಣ್ಣುಮಕ್ಕಳಿಗೆ ಗೌರವ ದೊರಕಬೇಕು ಎನ್ನುವ ನಿಟ್ಟಿನಲ್ಲಿ ಚೇರಳ ಭಾಗಕ್ಕೆ ಸೇರಿದ 80 ಗೌಡ ಕುಟುಂಬಗಳಿAದ ಮದುವೆಯಾಗಿ ತೆರಳಿದ ಮಹಿಳೆಯರನ್ನು ತವರೂರಿನಲ್ಲಿ ಆತ್ಮಿಯವಾಗಿ ಸನ್ಮಾನಿಸಿ ಗೌರವ ಸೂಚಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ಗೌಡ ಸಮುದಾಯಗಳ ವಿವಿಧ ಸಂಘಟನೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಚೇರಳ ಭಾಗದ ಸುತ್ತಮುತ್ತಲಿನ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಪಾತ್ರರಾದರು. ಈ ಸಂದರ್ಭದಲ್ಲಿ ಸಮುದಾಯ ಭವನಕ್ಕೆ ಧನಸಹಾಯ ನೀಡಿದವರನ್ನು, ಕಟ್ಟಡ ನಿರ್ಮಾಣದ ಕನಸು ಹೊತ್ತು ಸದಾ ಕೈ ಜೊಡಿಸಿದ ಮಹನೀಯರನ್ನು, ಗೌಡ ಸಮಾಜದ ಸಭೆ ನಡೆಸಲು ಸ್ಥಳಾವಕಾಶ ಮಾಡಿದವರನ್ನು, ಕಟ್ಟಡ ನಿರ್ಮಿಸಿದ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net