ಸಿದ್ದಾಪುರದಲ್ಲಿ ಮಜ್ದೂರ್ ಸಂಘದಿಂದ ವಿವಿಧ ಸ್ಪರ್ಧೆ

ಪ್ರೇಕ್ಷಕರ ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ
sdp
ಸಿದ್ದಾಪುರದ ವಾಹನ ಚಾಲಕರ ಮಜ್ದೂರ್ ಸಂಘದ ವತಿಯಿಂದ ಮಂಗಳವಾರ ಹಮ್ಮಿ ಕೊಂಡಿದ್ದ 33ನೇ ವರ್ಷದ ಆಯುಧಪೂಜಾ ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದ ಸಾಧಕ ಮಕ್ಕಳನ್ನು ಸನ್ಮಾನಿಸಲಾಯಿತು. ಶಾಸಕ ಎ.ಎಸ್. ಪೊನ್ನಣ್ಣ , ಸಂಘದ ಅಧ್ಯಕ್ಷ ಸೂದನ ಸತೀಶ್, ದಸರಾ ಆಚರಣಾ ಸಮಿತಿ ಅಧ್ಯಕ್ಷ ದಾಸನ್ ಇತರರು ಇದ್ದರು. ಸಿದ್ದಾಪುರದ ವಾಹನ ಚಾಲಕರ ಮಜ್ದೂರ್ ಸಂಘದ ವತಿಯಿಂದ ಮಂಗಳವಾರ ಹಮ್ಮಿ ಕೊಂಡಿದ್ದ 33ನೇ ವರ್ಷದ ಆಯುಧಪೂಜಾ ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದ ಸಾಧಕ ಮಕ್ಕಳನ್ನು ಸನ್ಮಾನಿಸಲಾಯಿತು. ಶಾಸಕ ಎ.ಎಸ್. ಪೊನ್ನಣ್ಣ , ಸಂಘದ ಅಧ್ಯಕ್ಷ ಸೂದನ ಸತೀಶ್, ದಸರಾ ಆಚರಣಾ ಸಮಿತಿ ಅಧ್ಯಕ್ಷ ದಾಸನ್ ಇತರರು ಇದ್ದರು. honour
Published on: 

ಸಿದ್ದಾಪುರ : ಸಿದ್ದಾಪುರದ ವಾಹನ ಚಾಲಕರ ಮಜ್ದೂರ್ ಸಂಘದ ವತಿಯಿಂದ 33ನೇ ವರ್ಷದ ಆಯುಧಪೂಜಾ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ವೈವಿಧ್ಯಮಯ ಕಾರ್ಯಕ್ರಮ ನೆರವೇರಿತು.

ಬೆಳಗ್ಗೆ ಸಾಮೂಹಿಕ ವಾಹನ ಪೂಜೆಯೊಂದಿಗೆ ಚಾಲನೆಗೊಂಡ ಕಾರ್ಯಕ್ರಮದ ನಂತರ ರಸ್ತೆ ಓಟ ಸ್ಪರ್ಧೆಗೆ ಸ್ಥಳೀಯ ಮುಖಂಡ ವೆಂಕಪ್ಪ ರೈ ಚಾಲನೆ ನೀಡಿದರು. ಮಕ್ಕಳಿಗಾಗಿ ನಿಧಾನ ಸೈಕಲ್ ರೇಸ್ ಹಾಗೂ ಮಹಿಳೆಯರಿಗಾಗಿ ಮ್ಯೂಸಿಕಲ್ ಚೇರ್ ಸ್ಪರ್ಧೆಗಳೂ ಈ ಸಂದರ್ಭ ನೆರವೇರಿದವು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಶಾಸಕ ಎ.ಎಸ್. ಪೊನ್ನಣ್ಣ ಬಹುಮಾನ ವಿತರಿಸಿ ಗೌರವಿಸಿದರು. ನಂತರ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ನೆರವಾಗಲಿದೆ ಎಂದರು.

ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಗೀತ ರಸಮಂಜರಿ ನೆರೆದವರನ್ನು ರಂಜಿಸಿದವು. ಸಂಘದ ಅಧ್ಯಕ್ಷ ಸೂದನ ಸತೀಶ್, ದಸರಾ ಆಚರಣಾ ಸಮಿತಿ ಅಧ್ಯಕ್ಷ ದಾಸನ್, ಕಾರ್ಯದರ್ಶಿ ಸಜಿಲ್ ಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net