ಶಿರಂಗಾಲ ಪ್ರೌಢಶಾಲೆಗೆ ಕಂಪ್ಯೂಟರ್ ಕೊಡುಗೆ

 ಶಿರಂಗಾಲ ಸರ್ಕಾರಿ ಪ್ರೌಢಶಾಲೆಗೆ ಬೆಂಗಳೂರಿನ ಇಂಡಿಯಾ ಕ್ಲೌಡ್ ಸ್ಟಾಪ್ ಕಂಪೆನಿ ವತಿಯಿಂದ 5 ಲ್ಯಾಪ್ ಟಾಪ್‌ಗಳನ್ನು ಕಂಪನಿಯ ಜನರಲ್ ಮ್ಯಾನೇಜರ್ ಸಬ್ಬಂಡ್ರ ಜಗದೀಶ್ ಕುಶಾಲಪ್ಪ ಕೊಡುಗೆಯಾಗಿ ವಿತರಿಸಿದರು. ಪಿ. ಸೋಮಚಂದ್ರ, ರಮೇಶ್, ಗಿರೀಶ್ ಇತರರು ಇದ್ದರು.
ಶಿರಂಗಾಲ ಸರ್ಕಾರಿ ಪ್ರೌಢಶಾಲೆಗೆ ಬೆಂಗಳೂರಿನ ಇಂಡಿಯಾ ಕ್ಲೌಡ್ ಸ್ಟಾಪ್ ಕಂಪೆನಿ ವತಿಯಿಂದ 5 ಲ್ಯಾಪ್ ಟಾಪ್‌ಗಳನ್ನು ಕಂಪನಿಯ ಜನರಲ್ ಮ್ಯಾನೇಜರ್ ಸಬ್ಬಂಡ್ರ ಜಗದೀಶ್ ಕುಶಾಲಪ್ಪ ಕೊಡುಗೆಯಾಗಿ ವಿತರಿಸಿದರು. ಪಿ. ಸೋಮಚಂದ್ರ, ರಮೇಶ್, ಗಿರೀಶ್ ಇತರರು ಇದ್ದರು.
Published on
ಕುಶಾಲನಗರ:
ಕುಶಾಲನಗರ ತಾಲೂಕು ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಬೆಂಗಳೂರಿನ ಇಂಡಿಯಾ ಕ್ಲೌಡ್ ಸ್ಟಾಪ್ ಕಂಪೆನಿಯ ವತಿಯಿಂದ ಸಿ.ಎಸ್.ಆರ್. ಯೋಜನೆಯಡಿ 5 ಲ್ಯಾಪ್ ಟಾಪ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಕಂಪ್ಯೂಟರ್‌ಗಳನ್ನು ಶಾಲೆಗೆ ಹಸ್ತಾಂತರಿಸಿ ಕಂಪ್ಯೂಟರ್ ಕಲಿಕಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಕ್ಲೌಡ್ ಸ್ಟಾಪ್ ಕಂಪನಿಯ ಜನರಲ್ ಮ್ಯಾನೇಜರ್ ಸಬ್ಬಂಡ್ರ ಜಗದೀಶ್ ಕುಶಾಲಪ್ಪ , ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ಹಾಗೂ ಕೌಶಲ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಕಾಲೇಜು ಪ್ರಾಂಶುಪಾಲ ಪಿ. ಸೋಮಚಂದ್ರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕಂಪ್ಯೂಟರ್ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.
ಕಾಲೇಜು ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕಿ ಶೈಲಜಾ ಮನು ಅಚ್ಚಮಯ್ಯ ಮಾತನಾಡಿ, ಸಮುದಾಯದ ಸಹಭಾಗಿತ್ವ ಕಾರ್ಯಕ್ರಮದಡಿ ಸಿಶಾಲೆಗೆ ಲ್ಯಾಪ್ ಟಾಪ್‌ಗಳನ್ನು ನೀಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎನ್.ಎಸ್. ರಮೇಶ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಎಸ್.ಆರ್. ಗಿರೀಶ್, ಸಮಿತಿ ಸದಸ್ಯರು, ಉಪನ್ಯಾಸಕರು ಹಾಗೂ ಶಿಕ್ಷಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net