ಕೊಡವರ ಸಂಸ್ಕೃತಿಗೆ ಕೃಷಿಯೇ ಮೂಲ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಗೋಣಿಕೊಪ್ಪಲು ಶ್ರೀ ಇಗ್ಗುತಪ್ಪ ಕೊಡವ ಅಸೋಸಿಯೇಶನ್‌ನಲ್ಲಿ 21ನೇ ಕೊಡವ ಪುಸ್ತಕ ಪತ್ತಾಯ ಅನಾವರಣಗೊಳಿಸಲಾಯಿತು. ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಅಜ್ಜಿಕುಟ್ಟಿರ ಸಿ. ದೇವಯ್ಯ, ಮೂಕಳಮಡ ಸುಬ್ರಮಣಿ, ಅಯ್ಯಂಡ ಪೂವಯ್ಯ, ಮಾಳೇಟಿರ ಗಣಪತಿ ಮತ್ತಿತರರು ಇದ್ದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಗೋಣಿಕೊಪ್ಪಲು ಶ್ರೀ ಇಗ್ಗುತಪ್ಪ ಕೊಡವ ಅಸೋಸಿಯೇಶನ್‌ನಲ್ಲಿ 21ನೇ ಕೊಡವ ಪುಸ್ತಕ ಪತ್ತಾಯ ಅನಾವರಣಗೊಳಿಸಲಾಯಿತು. ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಅಜ್ಜಿಕುಟ್ಟಿರ ಸಿ. ದೇವಯ್ಯ, ಮೂಕಳಮಡ ಸುಬ್ರಮಣಿ, ಅಯ್ಯಂಡ ಪೂವಯ್ಯ, ಮಾಳೇಟಿರ ಗಣಪತಿ ಮತ್ತಿತರರು ಇದ್ದರು.
Published on
ಗೋಣಿಕೊಪ್ಪಲು
ಕೊಡವರು ಮೂಲತಃ ಕೃಷಿಕರಾಗಿದ್ದು, ಕೃಷಿಯೇ ಜೀವನಾಧಾರ, ಕೃಷಿಯೇ ಸಂಸ್ಕೃತಿಗೆ ಮೂಲ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು. ಗೋಣಿಕೊಪ್ಪಲು ಶ್ರೀ ಇಗ್ಗುತಪ್ಪ ಕೊಡವ ಅಸೋಸಿಯೇಶನ್‌ನಲ್ಲಿ ಬುಧವಾರ ನಡೆದ ಅಕಾಡೆಮಿಯ 21ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೈಲ್‌ಪೊವ್ದ್, ಕಾವೇರಿ ಚಂಗ್ರಾAದಿ ಹಾಗೂ ಪುತ್ತರಿ ಹಬ್ಬಗಳು ಕೃಷಿಯಾಧಾರಿತವಾಗಿದೆ. ಕೊಡವರ ಮದುವೆಗಳಲ್ಲಿ ಸಮ್ಮಂದ ಅಡ್‌ಕುವ ಪದ್ಧತಿಗೆ ಬಹಳ ಪ್ರಾಮುಖ್ಯತೆ ಹಾಗೂ ಪ್ರಾಶಸ್ತö್ಯವಿದೆ. ಇದರಲ್ಲಿ ಬರುವ ಪದ ಸಾಲುಗಳೆಲ್ಲವೂ ಕೃಷಿಯನ್ನು ಉಲ್ಲೇಖಿಸುತ್ತದೆ. ಕ್ರೋಢದೇಶದ ಆರಂಭವೇ ಕೃಷಿಗೆ ಹೊಂದಿಕೊAಡಿದ್ದು, ಆ ಯುಗದ ಕೊಡವ ಹಿರಿಯರು ಸ್ವತಃ ಕೈಯ್ಯಾರೆ ಭೂಮಿಯನ್ನು ಉಳುಮೆ ಮಾಡಿ ಕೃಷಿಗೆ ತಕ್ಕಂತೆ ಹದಗೊಳಿಸಿದ್ದು ಉಲ್ಲೇಖವಾಗಿದೆ.
ಕೊಡಗಿನ ಕೃಷಿಭೂಮಿಗಳು ಇತ್ತೀಚಿನ ವರ್ಷಗಳಲ್ಲಿ ಪರಭಾರೆಗೊಳ್ಳುತ್ತಿರುವುದು ಆತಂಕ ಮೂಡಿಸುತ್ತಿದ್ದು, ಇಲ್ಲಿನ ನೆಲ-ಜಲ, ಸಾಮಾಜಿಕ ಸ್ಥಿತಿಗತಿ, ಸಾಂಸ್ಕೃತಿಕ ವೈಭವಗಳು ತನ್ನತನವನ್ನು ಕಳೆದುಕೊಳ್ಳುವ ಭೀತಿಯುಂಟಾಗುತ್ತಿದೆ. ಅನಾದಿ ಕಾಲದಿಂದ ಪಾರಂಪರ್ಯವಾಗಿ ಬಂದಿರುವ ಕೃಷಿಭೂಮಿಯನ್ನು ಪರಭಾರೆ ಮಾಡುವ ನೈತಿಕತೆ ಯಾವುದೇ ಕೊಡವನಿಗೆ ಇಲ್ಲ. ತಾನು ಸ್ವತಃ ಸಂಪಾದಿಸಿದ ಆಸ್ತಿಯನ್ನು ಮಾತ್ರ ಪರರಿಗೆ ಮಾರಬಹುದಲ್ಲದೆ ಪಿತ್ರಾರ್ಜಿತ ಆಸ್ತಿಯನ್ನು ಮಾರುವ ನೈತಿಕತೆ ಇಲ್ಲ.
ಕೊಡವ ಪುಸ್ತಕ ಪತ್ತಾಯವನ್ನು ಸಂಘ-ಸAಸ್ಥೆ, ಸಮಾಜಗಳಲ್ಲಿ ಸ್ಥಾಪಿಸುವ ಉದ್ದೇಶವೆಂದರೆ ಈ ಮಣ್ಣಿನ ಹಿರಿತನ, ಸಾಂಸ್ಕೃತಿಕ ಸಿರಿತನವನ್ನು ಸಾಹಿತ್ಯಗಳ ಮೂಲಕ ತಿಳಿದುಕೊಳ್ಳುವುದಾಗಿದೆ. ಇಂತಿರುವಾಗ ಆಯಾಯ ಜಾಗದಲ್ಲಿ ಸ್ಥಾಪಿಸಿರುವ ಪುಸ್ತಕ ಪತ್ತಾಯದಿಂದ ಪುಸ್ತಕಗಳನ್ನು ಪಡೆದುಕೊಂಡು ಓದುವುದರ ಮೂಲಕ ನಾಡಿನ ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದಾಗಿದೆ ಎಂದರು.
ಕೊಡವ ಪುಸ್ತಕ ಪತ್ತಾಯ ಅನಾವರಣಗೊಳಿಸಿದ ಶ್ರೀ ಇಗ್ಗುತಪ್ಪ ಕೊಡವ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ಸಿ. ದೇವಯ್ಯ ಮಾತನಾಡಿ, ಪುಸ್ತಕ ಓದುವ ಅಭ್ಯಾಸ ಮರುಕಳಿಸುವಂತಾಗಬೇಕು. ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಇಂತಹ ಸಾಹಿತ್ಯಪರ ಕಾರ್ಯಕ್ರಮಗಳು ನಡೆಯುತ್ತಿರುವುದು ಪುಸ್ತಕ ಪ್ರೇಮಿಗಳಿಗೆ ಅನುಕೂಲಕರವಾಗಿದೆ ಎಂದು ಹೇಳಿದರು.
ಶ್ರೀ ಇಗ್ಗುತಪ್ಪ ಕೊಡವ ಸಂಘದಲ್ಲಿ ಸ್ಥಾಪಿಸಿರುವ ಪುಸ್ತಕ ಪತ್ತಾಯದ ನೋಂದಣಿ ಬಾಪ್ತು ಹತ್ತು ಸಾವಿರ ರೂ. ಚೆಕ್ ಅನ್ನು ಅಕಾಡೆಮಿ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು. ಅಕಾಡೆಮಿ ವತಿಯಿಂದ ನೋಂದಣಿ ಪತ್ರವನ್ನು ಸಂಘದ ಅಧ್ಯಕ್ಷರಿಗೆ ನೀಡಲಾಯಿತು. ನಂತರ ಶ್ರೀ ಇಗ್ತುತಪ್ಪ ಕೊಡವ ಸಂಘ ಹಾಗೂ ಚೋಡುಮಡ ಕುಟುಂಬಸ್ಥರಿಗೆ ಅಕಾಡೆಮಿ ವತಿಯಿಂದ ದುಡಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಮೂಕಳಮಡ ಸುಬ್ರಮಣಿ, ಖಜಾಂಚಿ ಅಯ್ಯಂಡ ಪೂವಯ್ಯ, ನಿರ್ದೇಶಕರುಗಳಾದ ಮಾಳೇಟಿರ ಗಣಪತಿ, ಚೋಡುಮಡ ರಾಜ ಅಯ್ಯಣ್ಣ, ಚೊಟ್ಟೆಯಂಡಮಡ ಅರುಣ್, ಚೋನಿರ ಮಂಜು ಮುತ್ತಣ್ಣ, ಮಲ್ಲಂಡ ಸುರೇಶ್, ನೆಲ್ಲಮಕ್ಕಡ ಪ್ರೇಮ, ಚೆರಿಯಪಂಡ ಲತ ಪೂಣಚ್ಚ, ಮೇಕೇರಿರ ಖಾನ, ಕುಪ್ಪಂಡ ಗಣೇಶ, ಅಕಾಡೆಮಿ ಸದಸ್ಯರಾದ ನಾಯಂದಿರ ಆರ್. ಶಿವಾಜಿ, ಪೊನ್ನಿರ ಯು. ಗಗನ್,
ನೂರೆರ ಧನ್ಯ ರವೀಂದ್ರ, ಪುಚ್ಚಿಮಂಡ ರೇಖ, ಬೆಂಜAಡ ರಶ್ಮಿ ದೇವಯ್ಯ, ಶಾಂತೆಯAಡ ಮಧು, ಚೋಡುಮಡ ರಾಜ ಅಯ್ಯಣ್ಣ, ಚೋನಿರ ಸತ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net