

ಮಡಿಕೇರಿ
ಕೊಡಗು ಜಿಲ್ಲಾ ಪಂಚಾಯಿತಿ, ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ ಮತ್ತು ಮಡಿಕೇರಿ ನೆಹರೂ ಯುವ ಕೇಂದ್ರದ ಸಹಯೋಗದಲ್ಲಿ ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ಬುಧವಾರ ನಡೆಯಿತು. ಮಡಿಕೇರಿ ತಾಲೂಕು ಯುವ ಒಕ್ಕೂಟ, ತಾಳತ್ತಮನೆಯ ನೇತಾಜಿ ಯುವತಿ ಮಂಡಳಿ ಹಾಗೂ ನೇತಾಜಿ ಯುವಕ ಮಂಡಲದಲ್ಲಿ ಸಂಯುಕ್ತಾಶ್ರಯದಲ್ಲಿ ತಾಳತ್ತಮನೆಯ ಆಟದ ಮೈದಾನದಲ್ಲಿ ಶಿಬಿರ ಆಯೋಜಿಸಲಾಗಿತ್ತು.
ಮಡಿಕೇರಿ ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಸಿ.ಪಿ. ಚೇತನ್, ಡಾ. ಸಿ.ಎಸ್. ಶಿಲ್ಪಾಶ್ರೀ, ಡಾ. ಚೆಟ್ಟಿಚ್ಚ ಹಾಗೂ ಸಿಬ್ಬಂದಿನೇತೃತ್ವದಲ್ಲಿ ಶಿಬಿರ ನಡೆಸಲಾಯಿತು. ನೇತಾಜಿ ಯುವಕ ಮಂಡಲದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಶಿಬಿರದಲ್ಲಿ ತಾಳತ್ತಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಅನೇಕ ಪಶುಪ್ರೇಮಿಗಳು ತಮ್ಮ ಸಾಕುಪ್ರಾಣಿಗಳೊಂದಿಗೆ ಭಾಗವಹಿಸಿ ಉಚಿತ ಲಸಿಕಾ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡರು. ಒಟ್ಟು 99 ಶ್ವಾನಗಳು ಹಾಗೂ 11 ಬೆಕ್ಕುಗಳಿಗೆ ರೇಬಿಸ್ ಲಸಿಕೆ ನೀಡಲಾಯಿತು.