ಕಾಲೇಜು ವಿದ್ಯಾರ್ಥಿಯ ಅಪಹರಣ

virtual kidnapping
Published on

ಗಂಗೊಳ್ಳಿ: ಆಲೂರು ಗ್ರಾಮದ ಭಾಸ್ಕರ ಎಂಬುವರ ಮಗ ಭರತ್(16) ಎಂಬಾತನನ್ನು ಅಪಹರಿಸಿರುವ ಬಗ್ಗೆ ಶುಕ್ರವಾರ ದೂರು ದಾಖಲಾಗಿದೆ.

ಕೊಲ್ಲೂರು ಮೂಕಾಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಭರತ್ ನ.8ರಂದು ಬೆಳಗ್ಗೆ 8.30 ಆಲೂರು ಗ್ರಾಮದ ಕಳಿ ಮೇಲ್ಮನೆಯ ಮನೆಯಿಂದ ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಆತನನ್ನು ಯಾರೋ ಪುಸಲಾಯಿಸಿ ಅಪಹರಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.

ಭರತ್ 5 ಅಡಿ ಎತ್ತರ, ಗೋಧಿ ಮೈಬಣ್ಣ, ಕಪ್ಪು ತಲೆ ಕೂದಲು, ಕನ್ನಡ ಭಾಷೆ ಮಾತನಾಡುತ್ತಿದ್ದು, ಹಸಿರು ಪ್ಯಾಂಟ್ ಮತ್ತು ಬಿಳಿ ಚೆಕ್ಸ್ ಬಣ್ಣದ ಸಮವಸ್ತ್ರ ಧರಿಸಿದ್ದಾನೆ. ಗುರುತು ಪತ್ತೆ ಹಚ್ಚಿದ್ದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಗಂಗೊಳ್ಳಿ ಪೊಲೀಸರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net