ಇಂದಿನಿಂದ 3 ದಿನ ಇನ್ವೆಸ್ಟ್​ ಕರ್ನಾಟಕ ಸಮಾವೇಶ: ಹೂಡಿಕೆದಾರರಿಗೆ ರತ್ನಗಂಬಳಿ ಹಾಸಿದ ರಾಜ್ಯ ಸರ್ಕಾರ

WhatsApp Image 2022-11-02 at 11.24.19 AM
Published on

ಬೆಂಗಳೂರು: "ಬಿಲ್ಡ್​ ಫಾರ್​ ದಿ ವರ್ಲ್ಡ್​'' ಪರಿಕಲ್ಪನೆಯಡಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ 'ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ'ಕ್ಕೆ ಇಂದು(ನ.2) ಚಾಲನೆ ಸಿಕ್ಕಿದೆ. ಮೂರು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ ಜಗತ್ತಿನ ಖ್ಯಾತನಾಮ ಉದ್ಯಮಿಗಳು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದು, ಅಂದಾಜು 7 ಲಕ್ಷ ಕೋಟಿ ರೂ. ಹೂಡಿಕೆಯಾಗುವ ಹಾಗೂ ಅಂದಾಜು 3 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಹೂಡಿಕೆಗೆ ಪೂರಕವಾದ ವಾತಾವರಣ, ನಿಯಮಗಳ ಸಡಿಲಿಕೆ, ಪ್ರೋತ್ಸಾಹಕ ಯೋಜನೆಗಳು, ಅಗತ್ಯ ಭೂಮಿ, ನಿರಂತರ ಫಾಲೋಅಪ್​ಗೆ ಅಧಿಕಾರಿಗಳ ನೇಮಕ ಸೇರಿ ವಿವಿಧ ಕ್ರಮಗಳನ್ನು ಕೈಗೊಂಡಿರುವ ಸರ್ಕಾರ, ಹೂಡಿಕೆದಾರರಿಗೆ ರತ್ನಗಂಬಳಿ ಹಾಸಿದೆ.

ಇನ್ವೆಸ್ಟ್ ಕರ್ನಾಟಕ- ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಇಂದು ಬೆಳಗ್ಗೆ 10ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ನೀಡಿ ಭಾಷಣ ಮಾಡಿದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಮಾವೇಶದ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್ ಉದ್ಘಾಟಿಸಿದರು. ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ ಪಿಯೂಷ್ ಗೋಯೆಲ್, ಕೈಗಾರಿಕೆ ಸಚಿವ ಮುರುಗೇಶ್​ ನಿರಾಣಿ, ಐಟಿ-ಬಿಟಿ ಸಚಿವ ಅಶ್ವತ್ಥ್​ ನಾರಾಯಣ್​, ಸಚಿವ ಎಂಟಿಬಿ ನಾಗರಾಜ್, ಮೈಸೂರಿನ ರಾಜವಂಶಸ್ಥೆ ಪ್ರಮೋದಾ ದೇವಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net