‘ಕರ್ನಾಪೆಕ್ಸ್’ ಅಂಚೆ ಚೀಟಿಗಳ ಹಬ್ಬ

Post Card Fest
Published on


ಬೆಂಗಳೂರು : ಕರ್ನಾಟಕ ಅಂಚೆ ವೃತ್ತವು ರಾಜಧಾನಿಯಲ್ಲಿ 5ರಿಂದ 8ರವರೆಗೆ ‘ಕರ್ನಾಪೆಕ್ಸ್- 2024’ 13ನೇ ವರ್ಷದ ರಾಜ್ಯಮಟ್ಟದ ಅಂಚೆ ಚೀಟಿಗಳ ಹಬ್ಬ ಆಯೋಜಿಸಿದೆ.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಅಂಚೆ ಚೀಟಿ ಸಂಗ್ರಹಕಾರಿಗಾಗಿ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆ ಏರ್ಪಡಿಸಲಾಗಿದೆ .ಪ್ರದರ್ಶನದಲ್ಲಿ ಇತಿಹಾಸ, ಸಂಸ್ಕೃತಿ, ಕಲೆ, ಪರಂಪರೆ, ವಿಜ್ಞಾನ, ತಂತ್ರಜ್ಞಾನ, ವನ್ಯಜೀವಿಗಳು, ಸಸ್ಯ ಸಂಪತ್ತು ಮುಂತಾದ ವಿಷಯಗಳನ್ನು ಅಂಚೆ ಚೀಟಿಗಳು, ವಿಶೇಷ ಲಕೋಟೆಗಳ ವಿಭಿನ್ನ ಸಂಗ್ರಹವುಳ್ಳ 690 ಚೌಕಟ್ಟುಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ (ಕರ್ನಾಟಕ ವೃತ್ತ) ಎಸ್. ರಾಜೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರದರ್ಶನದಲ್ಲಿ ಪ್ರತಿ ದಿನ ವಿಶೇಷ ಲಕೋಟೆ ಬಿಡುಗಡೆ ಮಾಡಲಾಗುವುದು. ಜ.5ರಂದು ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿ, 6ರಂದು ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ, 7ರಂದು ಮಾನಸಿಕ ಸ್ವಾಸ್ಥ್ಯ ಮತ್ತು ಕ್ರೀಡೆ ಹಾಗೂ 8ರಂದು ಮಹಿಳಾ ಸಬಲೀಕರಣದ ಕುರಿತು ವಿಷೇಷ ಅಂಚೆ ಚೀಟಿ, ಲಕೋಟೆಗಳನ್ನು ಬಿಡುಗಡೆ ಮಾಡಲಾಗುವುದು. ಡಾ. ಪುನೀತ್ ರಾಜ್‌ಕುಮಾರ್, ಮೈಸೂರು ಸ್ಯಾಂಡಲ್, ಆದಿತ್ಯ ಎಲ್1- ಭಾರತದ ಮೊದಲ ಸೂರ್ಯಯಾನ ಯೋಜನೆ, ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ ರಾಗಿ ಮುದ್ದೆ, ಜೋಳದ ರೊಟ್ಟಿ, ಪಾರಂಪರಿಕ ಆಟಗಳಾದ ಕುಂಟೋಬಿಲ್ಲೆ, ಬುಗುರಿಯಾಟ, ಕಂಬಳ, ಪಗಡೆ, ಕಾಫಿಪುಡಿ ಸಾಕಮ್ಮ, ರಾಣಿ ಅಬ್ಬಕ್ಕ, ಪ್ರವಾಸ ಮತ್ತು ಪರಂಪರೆಯ ತಾಣಗಳನ್ನು ಅಂಚೆ ಚೀಟಿ ಹಾಗೂ ಲಕೋಟೆಗಳಲ್ಲಿ ಕಾಣಬಹುದಾಗಿದೆ ಎಂದರು.

ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ಚರ್ಚೆ, ಗೋಷ್ಠಿಗಳು ನಡೆಯಲಿವೆ. ಕೊನೆಯ ದಿನವಾದ ಜ.8ರಂದು ಮಧ್ಯಾಹ್ನ ನಡೆಯುವ ಸಮಾರೋಪದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡೈರೆಕ್ಟರ್ ಪೋಸ್ಟಲ್ ಸರ್ವಿಸ್ ಬೆಂಗಳೂರು ವಿಭಾಗ ಎಲ್. ಕೆ. ಡ್ಯಾಶ್, ಡೈರೆಕ್ಟರ್ ಪೋಸ್ಟಲ್ ಸರ್ವಿಸ್ ರಾಜ್ಯ ಉತ್ತರ ವಿಭಾಗ ಕಯ್ಯ ಅರೋರ ಹಾಗೂ ಸೀನಿಯರ್ ಸೂಪರಿಂಟೆಂಡೆಂಟ್ ಆ್ ೆಸ್ಟ್ ಪೂರ್ವ ವಲಯ ರಂಜಿತ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net